ಪಂಜಾಬ್‌ʼಗೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ: ಮೋದಿಗೆ ರಾಹುಲ್ ಗಾಂಧಿ ಒತ್ತಾಯ

0
Spread the love

ನವದೆಹಲಿ: ಪಂಜಾಬ್‌ʼಗೆ ಕೂಡಲೆ ಸಮಗ್ರ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಒತ್ತಾಯ ಮಾಡಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಈ ಹಿಂದೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರವಾಹದಿಂದಾಗಿ ಪಂಜಾಬ್ ಸುಮಾರು 20,000 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ.

Advertisement

ಆದರೆ, ಪ್ರಧಾನಿ ಮೋದಿ ಘೋಷಿಸಿದ 1600 ಕೋಟಿ ರೂ.ಗಳ ಆರಂಭಿಕ ಪರಿಹಾರದ ಪ್ಯಾಕೇಜ್ ಪಂಜಾಬ್ ಜನರಿಗೆ ಮಾಡಿದ ಅನ್ಯಾಯ ಎಂದು ಹೇಳಿದ್ದರು. ಲಕ್ಷಗಟ್ಟಲೆ ಮನೆಗಳು ನೆಲಸಮವಾಗಿವೆ, 4 ಲಕ್ಷ ಎಕರೆಗೂ ಹೆಚ್ಚು ಬೆಳೆಗಳು ನಾಶವಾಗಿವೆ ಮತ್ತು ಹೆಚ್ಚಿನ ಸಂಖ್ಯೆಯ ಪ್ರಾಣಿಗಳು ಕೊಚ್ಚಿ ಹೋಗಿವೆ.

ಆದರೂ ಪಂಜಾಬ್ ಜನರು ಧೈರ್ಯ ಮತ್ತು ಚೈತನ್ಯವನ್ನು ಪ್ರದರ್ಶಿಸಿದ್ದಾರೆ. ಅವರಿಗೆ ಬೆಂಬಲ ಮತ್ತು ಶಕ್ತಿ ಬೇಕು. ತಕ್ಷಣವೇ ಸಮಗ್ರ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ನಾನು ಮತ್ತೊಮ್ಮೆ ಪ್ರಧಾನಿಯನ್ನು ಒತ್ತಾಯಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here