ರಾಮನಗರ| ಬೈಕ್ ವೀಲ್ಹಿಂಗ್ ಮಾಡ್ತಿದ್ದ ನಾಲ್ವರು ಪುಂಡರು ಅರೆಸ್ಟ್!

0
Spread the love

ರಾಮನಗರ:- ಬೈಕ್ ವೀಲ್ಹಿಂಗ್ ಮಾಡ್ತಿದ್ದ ನಾಲ್ವರು ಪುಂಡರನ್ನು ಮಾಗಡಿ ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಮಾಗಡಿ-ಬೆಂಗಳೂರು ಹೆದ್ದಾರಿಯಲ್ಲಿ ಜರುಗಿದೆ.

Advertisement

ಹೆದ್ದಾರಿಯಲ್ಲಿ ಮೂರು ಬೈಕ್‌ಗಳಲ್ಲಿ ವೀಲ್ಹಿಂಗ್ ಮಾಡುತ್ತಾ ಇತರ ವಾಹನ ಸವಾರರಿಗೆ ತೊಂದರೆ ಮಾಡುವುದಲ್ಲದೇ ಅದನ್ನ ವೀಡಿಯೋ ಮಾಡ್ತಿದ್ದ ವಾಹನ ಸವಾರರಿಗೆ ಪುಂಡರು ಬೆದರಿಕೆ ಹಾಕಿದ್ದಾರೆ. ಕೂಡಲೇ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಮಾಗಡಿ ಪೊಲೀಸರು, ಮೂರು ಬೈಕ್ ಗಳನ್ನ ಸೀಜ್ ಮಾಡಿ, ಓರ್ವ ಯುವಕ ಸೇರಿ ಮೂವರು ಅಪ್ರಾಪ್ತ ಬಾಲಕರನ್ನ ವಶಕ್ಕೆ ಪಡೆದಿದ್ದಾರೆ.

ಅಲ್ಲದೇ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 281, 128, 177 ಐಎಂವಿ ಕಾಯ್ಡೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here