ವಿಜಯಸಾಕ್ಷಿ ಸುದ್ದಿ, ಗದಗ : ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಕೇವಲ 1 ತಿಂಗಳಲ್ಲಿ ಅಮೃತ ಕಾಲದ ಬಜೆಟ್ ಮಂಡನೆ ಮಾಡಿರುವದು ಸ್ವಾಗತಾರ್ಹ ಎಂದು ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಜೆಟ್‌ನಲ್ಲಿ ಗ್ರಾಮೀಣ ಅಭಿವೃದ್ಧಿಗೆ 2.66 ಲಕ್ಷ ಕೋಟಿ, ನಗರ ಪ್ರದೇಶಗಳ ಅಭಿವೃದ್ಧಿಗೆ 10 ಲಕ್ಷ ಕೋಟಿ, ಶಿಕ್ಷಣ ಹಾಗು ಉದ್ಯೋಗಕ್ಕಾಗಿ 1.48 ಲಕ್ಷ ಕೋಟಿ, ಮೂಲ ಸೌಕರ್ಯಕ್ಕಾಗಿ 11 ಲಕ್ಷ ಕೋಟಿ, ಸಣ್ಣ ಕೈಗಾರಿಕೆಗಳಿಗೆ ಸ್ವಯಂ ನಿಧಿ ಯೋಜನೆ, ಬಂಗಾರ-ಬೆಳ್ಳಿ ದರ ಇಳಿಕೆ, ಕಾಶಿ ವಿಶ್ವನಾಥ ದೇವಸ್ಥಾನ ಅಭಿವೃದ್ಧಿ, ದೇಶದಲ್ಲಿ 12 ಹೊಸ ಇಂಡ್ರಸ್ಟಿçಯಲ್ ಪಾರ್ಕ್ಗಳ ನಿರ್ಮಾಣ, ಪ್ರತಿ ರಾಜ್ಯಗಳಿಗೆ 50 ವರ್ಷ ಬಡ್ಡಿ ರಹಿತ ಸಾಲ, ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್, ದೇಶದ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು, ಮೊಬೈಲ್-ಚಾರ್ಜರ್ ಬೆಲೆ ಇಳಿಕೆ, ತೆರಿಗೆ ಪದ್ಧತಿ ಮತ್ತಷ್ಟು ಸಡಿಲೀಕರಣ, ಸರಕಾರಿ ನೌಕರರಿಗೆ ಬಹು ದೊಡ್ಡ ಕೊಡುಗೆ ಹಾಗು ರೈತರಿಗೆ, ಯುವಕರಿಗೆ ಹೆಚ್ಚಿನ ಒತ್ತು ನೀಡಿರುವದು, ದೇಶ ಪ್ರಗತಿಯತ್ತ ಸಾಗಲು ಹಲವಾರು ಯೋಜನೆಗಳನ್ನು ತಂದಿರುವದು ಶ್ಲಾಘನೀಯ.
ಇಂದಿನ ಕೇಂದ್ರ ಬಜೆಟ್‌ನಲ್ಲಿ ಅಮೃತ ಕಾಲ ಸೃಷ್ಟಿ ಮಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ರಿಗೆ ಗದಗ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನೆಗಳನ್ನು ಅವರು ತಿಳಿಸಿದ್ದಾರೆ.