ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಘಾಟಲ್‌ನಲ್ಲಿ ಘೋರ ದುರಂತ ನಡೆದಿದ್ದು, ಆಸಿಡ್ ಹಾಕಿರುವ ಆಹಾರ ಸೇವಿಸಿ ಒಂದೇ ಕುಟುಂಬದ 6 ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಘಾಟಲ್‌ನ ಮನೋಹರ್ಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ರತ್ನೇಶ್ವರಬತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ನೀರಿನ ಬದಲು ಆಸಿಡ್ ಬಳಸಿ ಬೇಯಿಸಿದ ಆಹಾರವನ್ನು ಸೇವಿಸಿದ ಸ್ವಲ್ಪ ಸಮಯದ ನಂತರ 6 ಜನರು ಅಸ್ವಸ್ಥರಾಗಿದ್ದಾರೆ. ಮೂವರು ಮಕ್ಕಳು ಸೇರಿದಂತೆ 6 ಜನರನ್ನೂ ಕೊಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮನೆ ಅಡುಗೆ ಮಾಡುತ್ತಿದ್ದ ಮಹಿಳೆ ನೀರನ್ನು ಭಾವಿಸಿ, ಆಸಿಡ್ ಹಾಕಿ ಊಟವನ್ನು ತಯಾರಿಸಿದ್ದರು. ಆ ಆಸಿಡ್ ಸಾಮಾನ್ಯವಾಗಿ ಬೆಳ್ಳಿ ಪಾತ್ರೆಗಳಿಗೆ ಬಳಸಲಾಗುತ್ತದೆ, ಆದರೆ ಆಹಾರದಲ್ಲಿ ಹಾಕಲಾಗಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ.
ಊಟ ಸೇವಿಸಿದ ನಂತರ, ಕುಟುಂಬದವರಿಗೆ ಹೊಟ್ಟೆ ನೋವು, ವಾಕರಿಕೆ ಮತ್ತು ತಲೆ ತಿರುಗುವಿಕೆ ಕಾಣಿಸಿತು. ಸ್ಥಳೀಯ ಆಸ್ಪತ್ರೆಗೆ ತಲುಪಿದ ಬಳಿಕ ತುರ್ತು ಚಿಕಿತ್ಸೆ ನೀಡಲಾಯಿತು.


