ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಷ್ಠಿತ ರಾಷ್ಟ್ರಪತಿ ಪದಕ ಹಾಗೂ ಡಿಜಿ–ಐಜಿಪಿ ಕಮೆಂಡೇಷನ್ ಡಿಸ್ಕ್ ಪ್ರಶಸ್ತಿಗೆ ಭಾಜನರಾಗಿರುವ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಮಾರುತಿ ಜೋಗದಂಡಕರ್ ಅವರನ್ನು ಗದಗಿನ ಸಾಮಾಜಿಕ ಸಂಸ್ಥೆಯಾದ ಅಮ್ಮ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚೆಗೆ ಬೆಂಗಳೂರಿನ ಕೋರಮಂಗಲದ 3ನೇ ಪಡೆ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಗೌರವ ಪ್ರದಾನ ಹಾಗೂ ಪಥಸಂಚಲನ ಸಮಾರಂಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರಿಂದ (ಡಿಜಿ–ಐಜಿಪಿ) ಅವರಿಗೆ ಪ್ರತಿಷ್ಠಿತ ಕಮೆಂಡೇಷನ್ ಡಿಸ್ಕ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಇದಕ್ಕೂ ಮುನ್ನ ರಾಷ್ಟ್ರಪತಿ ಪದಕಕ್ಕೂ ಭಾಜನರಾಗಿದ್ದ ಅವರು ಗದಗ ಜಿಲ್ಲೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ಹೆಮ್ಮೆ ತಂದಿರುವ ಹಿನ್ನೆಲೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸನ್ಮಾನ ಕಾರ್ಯಕ್ರಮದಲ್ಲಿ ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಲಲಿತಾ ಶರಣಪ್ಪ ಗೋಳಗೊಳಕಿ, ಗದಗ–ಬೆಟಗೇರಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಶರಣಪ್ಪ ಗೋಳಗೊಳಕಿ, ಆಶ್ರಯ ಸಮಿತಿ ನಾಮನಿರ್ದೇಶಿತ ಸದಸ್ಯ ಇಮಾಮ್ ಹುಸೇನ್ ರೋಣದ, ಜಾಕೀರಸಾಬ ಅಂಗಡಿ, ಚನ್ನಪ್ಪ ಹರದೊಳ್ಳಿ, ಭಾಷಾಸಾಬ ರೋಣದ, ಹನುಮಂತಪ್ಪ ಕೋಟೆಕಲ್ಲ, ಅನ್ವರಸಾಬ ದೋಟಿಹಾಳ, ಮುನ್ನಾಸಾಬ ಹೆಬಸೂರ, ಯಲ್ಲನಗೌಡ ಸೋಮನಕಟ್ಟಿ, ವಿನಯ್ ಮಂಜರಗಿ, ಸಯ್ಯದ್‌ಸಾಬ್ ತಹಸೀಲ್ದಾರ್, ಫಕ್ರುಸಾಬ್ ಬಡಿಗೇರ, ನಾಗರಾಜ ಹಿರೇಮನಿ ಪಾಟೀಲ್, ಪ್ರಭುಕುಮಾರ ಗೋಳಗೊಳಕಿ, ದೇವೇಂದ್ರ ಗಂಗಪ್ಪನವರ, ಬಸವರಾಜ ಮೈಲಪ್ಪನವರ, ಬಸವರಾಜ ಹೊಟ್ಟಿ ಸೇರಿದಂತೆ ವಾರ್ಡ್ ನಂ. 11ರ ಹಿರಿಯರು, ಹಮಾಲರ ಕಾಲೋನಿಯ ನಿವಾಸಿಗಳು, ಯುವಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.



