HomeIndia News220 ಔಷಧಗಳು ನಕಲಿ: ಡ್ರಗ್ ಕಂಟ್ರೋಲ್ ರಿಪೋರ್ಟ್ʼನಲ್ಲಿ ಆತಂಕಕಾರಿ ಮಾಹಿತಿ ಬಹಿರಂಗ!

220 ಔಷಧಗಳು ನಕಲಿ: ಡ್ರಗ್ ಕಂಟ್ರೋಲ್ ರಿಪೋರ್ಟ್ʼನಲ್ಲಿ ಆತಂಕಕಾರಿ ಮಾಹಿತಿ ಬಹಿರಂಗ!

For Dai;y Updates Join Our whatsapp Group

ನವದೆಹಲಿ/ಬೆಂಗಳೂರು: ದೇಶದಲ್ಲಿ ಔಷಧಿಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. 2026ರ ಆಗಸ್ಟ್‌ ತಿಂಗಳಲ್ಲಿ ದೇಶಾದ್ಯಂತ ನಡೆಸಲಾದ ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ಒಟ್ಟು 220 ಔಷಧ ಮಾದರಿಗಳು ನಿಗದಿತ ಗುಣಮಟ್ಟದ ಮಾನದಂಡಗಳನ್ನು (Not of Standard Quality-NSQ) ಪೂರೈಸಿಲ್ಲ ಎಂದು ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ (CDSCO) ವರದಿಯಲ್ಲಿ ತಿಳಿಸಿದೆ.

ಕೇಂದ್ರ ಹಾಗೂ ರಾಜ್ಯ ಮಟ್ಟದ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ನಡೆಸಲಾದ ಪರೀಕ್ಷೆಗಳ ಆಧಾರದ ಮೇಲೆ ಈ ವರದಿ ಸಿದ್ಧವಾಗಿದೆ. ಕೇಂದ್ರ ಔಷಧ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾದ 29 ಮಾದರಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಿಲ್ಲ ಎಂದು ಗುರುತಿಸಲಾಗಿದ್ದು, ರಾಜ್ಯ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ 191 ಮಾದರಿಗಳು NSQ ಎಂದು ಪತ್ತೆಯಾಗಿವೆ.

NSQ ಎಂದರೇನು?

ಔಷಧ ಮಾದರಿಯು ನಿಗದಿಪಡಿಸಲಾದ ಗುಣಮಟ್ಟದ ಮಾನದಂಡಗಳಲ್ಲಿನ ಒಂದು ಅಥವಾ ಹೆಚ್ಚು ಪರೀಕ್ಷೆಗಳಲ್ಲಿ ವಿಫಲವಾದರೆ ಅದನ್ನು NSQ (Not of Standard Quality) ಎಂದು ಗುರುತಿಸಲಾಗುತ್ತದೆ. ಸರ್ಕಾರಿ ಪ್ರಯೋಗಾಲಯದಲ್ಲಿ ಪತ್ತೆಯಾಗುವ ಈ ವೈಫಲ್ಯವು ನಿರ್ದಿಷ್ಟ ಔಷಧ ಉತ್ಪನ್ನದ ನಿರ್ದಿಷ್ಟ ಬ್ಯಾಚ್‌ಗೆ ಮಾತ್ರ ಅನ್ವಯಿಸುತ್ತದೆ ಎಂದು CDSCO ಸ್ಪಷ್ಟಪಡಿಸಿದೆ.

ಹೀಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಬ್ಯಾಚ್‌ಗಳ ಅಥವಾ ಇತರೆ ಔಷಧ ಉತ್ಪನ್ನಗಳ ಬಗ್ಗೆ ಸಾಮಾನ್ಯವಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ ತಿಳಿಸಿದೆ.

ಇದರ ಜೊತೆಗೆ, ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿ (NCT Delhi)ಯಿಂದ ಪರೀಕ್ಷೆಗೆ ಒಳಪಡಿಸಿದ ಒಂದು ಔಷಧ ಮಾದರಿಯನ್ನು ನಕಲಿ (Spurious) ಔಷಧ ಎಂದು ಗುರುತಿಸಲಾಗಿದೆ.

ಮತ್ತೊಂದು ಕಂಪನಿಯ ಮಾಲೀಕತ್ವದಲ್ಲಿರುವ ಬ್ರ್ಯಾಂಡ್ ಹೆಸರನ್ನು ಬಳಸಿಕೊಂಡು, ಅನುಮತಿ ಇಲ್ಲದ ತಯಾರಕರು ಈ ಔಷಧವನ್ನು ತಯಾರಿಸಿರುವುದು ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಸಂಬಂಧಿತ ಕಾಯ್ದೆ ಮತ್ತು ನಿಯಮಗಳ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು CDSCO ತಿಳಿಸಿದೆ.

ಕಡಿಮೆ ಗುಣಮಟ್ಟದ ಹಾಗೂ ನಕಲಿ ಔಷಧಿಗಳನ್ನು ಗುರುತಿಸಿ, ಅವು ಮಾರುಕಟ್ಟೆಗೆ ಪ್ರವೇಶಿಸದಂತೆ ತಡೆಯಲು ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳ ಸಹಯೋಗದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ ತಿಳಿಸಿದೆ.

ಔಷಧಿಗಳ ಗುಣಮಟ್ಟದ ಮೇಲ್ವಿಚಾರಣೆ ಮುಂದುವರಿಸಲಾಗಿದ್ದು, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಿತ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img