HomeGadag Newsಶ್ರೀ ಚನ್ನವೀರ ಶರಣರ 29ನೇ ಪುಣ್ಯಸ್ಮರಣೋತ್ಸವ

ಶ್ರೀ ಚನ್ನವೀರ ಶರಣರ 29ನೇ ಪುಣ್ಯಸ್ಮರಣೋತ್ಸವ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಮೌನ ತಪಸ್ವಿ ಚಿಕೇನಕೊಪ್ಪದ ಪೂಜ್ಯಶ್ರೀ ಚನ್ನವೀರ ಶರಣರ 29ನೇ ಪುಣ್ಯ ಸ್ಮರಣೋತ್ಸವ ಜುಲೈ 28ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಆನಂದರಾವ್ ಸರ್ಕಲ್‌ನಲ್ಲಿರುವ ಜ. ರೇಣುಕಾಚಾರ್ಯ ವಿದ್ಯಾಸಂಸ್ಥೆಯಲ್ಲಿ ಜರುಗುವುದು.

ಕಾರ್ಯಕ್ರಮದ ಪಾವನ ಸನ್ನಿಧಾನವನ್ನು ಬಳಗಾನೂರು ಸುಕ್ಷೇತ್ರದ ಪೂಜ್ಯಶ್ರೀ ಶಿವಶಾಂತ ವೀರಶರಣರು ವಹಿಸುವರು. ಬೆಂಗಳೂರಿನ ಲೇಖಕಿ ಹಾಗೂ ಚಿಂತಕಿ ವೀಣಾ ಬನ್ನಂಜೆ ಉಪನ್ಯಾಸ ನೀಡುವರು. ಬೆಂಗಳೂರಿನ ಗಾನ ಸಿದ್ದಗಂಗಾ ಸಂಗೀತ ವಿದ್ಯಾಲಯದ ಸಂಸ್ಥಾಪಕಿ ಗೀತಾ ಭತ್ತದ ಹಾಗೂ ತಂಡದವರಿಂದ ಭಕ್ತಿ ಸಂಗೀತ ಜರುಗುವುದು. ಬೆಂಗಳೂರಿನ ಆಕಾಶವಾಣಿ ಕಲಾವಿದೆ ಸವಿತಾ ಶಿವಕುಮಾರ ಕಾರ್ಯಕ್ರಮ ನಿರೂಪಿಸುವರು ಎಂದು ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಅಲ್ಲಮ ವೀರಭದ್ರಪ್ಪನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img