HomeGadag Newsಮಹಾಸಭಾದ ಬಲವರ್ಧನೆಗೆ ಸಹಕರಿಸಿ : ಶರಣಬಸಪ್ಪ ಗುಡಿಮನಿ

ಮಹಾಸಭಾದ ಬಲವರ್ಧನೆಗೆ ಸಹಕರಿಸಿ : ಶರಣಬಸಪ್ಪ ಗುಡಿಮನಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಜಿಲ್ಲಾ ಘಟಕವನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಸರ್ವರ ಸಹಕಾರ ಅಗತ್ಯವಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.

ಅವರು ಗದುಗಿನ ವೀರಶೈವ ಲೈಬ್ರರಿಯಲ್ಲಿ ವೀರಶೈವ ಮಹಾಸಭಾ ಗದಗ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಮಹಾಸಭಾದ ಚುನಾವಣೆಯಲ್ಲಿ ಕಾರ್ಯಕಾರಿ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದವರಿಗೆ ಘೋಷಣಾ ಪತ್ರ ವಿತರಣಾ ಔಪಚಾರಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಾಸಭಾದ ಕಟ್ಟಡ ನಿರ್ಮಾಣ ಕಾರ್ಯ ಚುರುಕುಗೊಳಿಸುವ, ಆಜೀವ ಸದಸ್ಯರ ಸಂಖ್ಯೆ ಹೆಚ್ಚಿಸುವ ಮೂಲಕ ಸಮಾಜವನ್ನು ಸಂಘಟನಾತ್ಮಕವಾಗಿ ಕಟ್ಟುವ ಕಾರ್ಯ, ಸಮಾಜ ಚಿಂತನೆ ಸೇರಿದಂತೆ ಪದಾಧಿಕಾರಿಗಳ, ಹಿರಿಯರಿಂದ ಬರುವ ಸಲಹೆ ಸೂಚನೆಗಳನ್ನು ಅನುಸರಿಸಿಕೊಂಡು ಮುನ್ನಡೆಯುವದಾಗಿ ಹೇಳಿದರು.

ಮಹಾಸಭಾದ ಉಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಮಾಜದ ಹಿರಿಯರಾದ ಬಸವರಾಜ ಬಿಳೇಯಲಿ ಅವರು ಅವಿರೋಧವಾಗಿ ಆಯ್ಕೆಯಾದ ಎಲ್ಲ ಕಾರ್ಯಕಾರಿ ಮಂಡಳಿಯವರಿಗೆ ಪ್ರಮಾಣಪತ್ರ ವಿತರಿಸಿ, ಎಲ್ಲರೂ ಒಗ್ಗಟ್ಟಿನಿಂದ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ ಮಹಾಸಭಾದ, ಸಮಾಜದ ಘನತೆ ಗೌರವನ್ನು ಹೆಚ್ಚಿಸಬೇಕೆಂದು ಸಲಹೆ ನೀಡಿದರು.

ಸದಾಶಿವಯ್ಯ ಮದರಿಮಠದ ಮಾತನಾಡಿ, ಮಹಾಸಭಾದ ಕಟ್ಟಡ ನಿರ್ಮಾಣ ಕಾರ್ಯದ ಕುರಿತು ಮುಂದಿನ ವಾರದ ಕರೆಯಲಾಗುವ ಸಭೆಯಲ್ಲಿ ರೂಪುರೇಷೆಗಳನ್ನು ತಿಳಿಸುವದಾಗಿ ಹೇಳಿದರು. ಸಂಶಿಮಠ ಹಾಗೂ ಬಸವರಾಜ ಕೊರ್ಲಹಳ್ಳಿ ಅವರು ಮಾತನಾಡಿದರು.

ಎಸ್.ವ್ಹಿ. ಜೀವನಗೌಡ್ರ, ಮುತ್ತನಗೌಡ ತೇಜಿಗೌಡ್ರ, ಮಲ್ಲಿಕಾರ್ಜುನಗೌಡ ಮಲ್ಲಾಪೂರ, ಬಸವರಾಜ ಅಂಗಡಿ, ಶ್ರೀಶೈಲಪ್ಪ ಚಳಗೇರಿ, ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ಪ್ರಭಾತಕುಮಾರ ನಾರಾಯಣಪೂರ, ಭೀಮರಡ್ಡೇಪ್ಪ ರಡ್ಡೇರ, ವೆಂಕಪ್ಪ ಬಂಗಾರಿ, ಮಂಜುನಾಥ ಮ್ಯಾಗೇರಿ, ಚನ್ನವೀರಪ್ಪ ಹುಣಸಿಕಟ್ಟಿ, ಚಂದ್ರಗೌಡ ಪಾಟೀಲ, ಚನ್ನಬಸಪ್ಪ ಕಂಠಿ, ಮುರುಘರಾಜೇಂದ್ರ ಬಡ್ನಿ, ಶಿವರಾಜಗೌಡ ಹಿರೇಮನಿಪಾಟೀಲ, ಕಾಶಪ್ಪ ಗದಗಿನ, ಬಾಪುಜಿ ಪಾಟೀಲ, ಶಿವಪ್ಪ ಅಂಕದ, ವಿಜಯಾನಂದ ಮುತ್ತಿನಪೆಂಡಿಮಠ, ಶಂಭು ಕಾರಕಟ್ಟಿ, ಉಮಾದೇವಿ ಕಾತರಕಿ, ಸುರೇಖಾ ಪಿಳ್ಳೆ, ಸುಪರ್ಣಾ ಬ್ಯಾಹಟ್ಟಿ, ಮಂಜುಳಾ ರೇವಡಿ, ನಿರ್ಮಲಾ ಚಿಕ್ಕನಗೌಡ್ರ, ಉಮಾವತಿ ನಾಯ್ಕರ್, ವಿಜಯಲಕ್ಷ್ಮಿ ಮಾನ್ವಿ, ಜಯಶ್ರೀ ಉಗಲಾಟದ, ಸುವರ್ಣಾ ಶೆಲ್ಲಿಕೇರಿ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಗೊಂಡವರಿಗೆ ಪ್ರಮಾಣಪತ್ರ ನೀಡಿದರು.

ಸಮಾರಂಭದಲ್ಲಿ ಸಮಾಜದ ಗಣ್ಯರು, ಹಿರಿಯರು ಉಪಸ್ಥಿತರಿದ್ದು ಸಲಹೆ-ಸೂಚನೆ ನೀಡಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img