HomeGadag Newsಬಸಮ್ಮ ತಾಯಿ ಸ್ಮರಣೋತ್ಸವದ ಕೃಷಿಗೋಷ್ಠಿ

ಬಸಮ್ಮ ತಾಯಿ ಸ್ಮರಣೋತ್ಸವದ ಕೃಷಿಗೋಷ್ಠಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ : ಜುಲೈ 31ರಂದು ಪಟ್ಟಣದ ಹಿರೇಮಠದ ಸಭಾಭವನದಲ್ಲಿ ರೋಣದ ಬಸಮ್ಮ ತಾಯಿ ಪಾಟೀಲ ಸ್ಮರಣೋತ್ಸವದ ಅಂಗವಾಗಿ ಕೃಷಿಗೋಷ್ಠಿ ಜರುಗಲಿದೆ ಎಂದು ಡಾ. ಕೆ.ಬಿ. ಧನ್ನೂರ ಹೇಳಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರೋಣದ ಸಂಗನಗೌಡ ಪಾಟೀಲರ ಮನೆತನವು ಮೂಲತಃ ಕೃಷಿ ಮನೆತನ. ಕೃಷಿಯ ಬಗ್ಗೆ ಅಪಾರವಾದ ಕಾಳಜಿಯುಳ್ಳ ಬಸಮ್ಮ ತಾಯಿಯವರ ಸ್ಮರಣೋತ್ಸವದ ಅಂಗವಾಗಿ ನರೇಗಲ್ಲದಲ್ಲಿಯೂ ಒಂದು ಕೃಷಿ ಗೋಷ್ಠಿಯನ್ನು ಏರ್ಪಡಿಸಬೇಕೆಂಬ ಆಸೆ ನಮ್ಮೆಲ್ಲರದೂ ಆಗಿತ್ತು. ಅದು ಈ ಸಾರೆ ಕೈಗೂಡಿದ್ದಕ್ಕೆ ನಮಗೆ ಸಂತಸವಾಗಿದೆ ಎಂದು ಡಾ. ಧನ್ನೂರ ನುಡಿದರು.

ಕೃಷಿಗೋಷ್ಠಿಯ ದಿವ್ಯ ಸಾನ್ನಿಧ್ಯವನ್ನು ನರೇಗಲ್ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ವಹಿಸಲಿದ್ದು, ಅಧ್ಯಕ್ಷತೆಯನ್ನು ಕೆ.ಸಿ.ಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ವಹಿಸಲಿದ್ದಾರೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಉದ್ಘಾಟಿಸಲಿದ್ದು, ಕೃಷಿ ಪಂಡಿತರಾದ ಗುರುನಾಥ ಓದುಗೌಡ್ರ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಬಿ.ಡಿ. ಬಿರಾದಾರ, ಡಾ. ಎಸ್.ಎಸ್. ಅಂಗಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಪ.ಪಂ ಸದಸ್ಯರಾದ ಮುತ್ತಪ್ಪ ನೂಲ್ಕಿ, ದಾವುದಲಿ ಕುದರಿ, ರಾಚಯ್ಯ ಮಾಲಗಿತ್ತಿಮಠ, ಬಸೀರಾಬಾನು ನದಾಫ್, ಪ್ರಗತಿಪರ ರೈತ ಬಸವರಾಜ ಕಳಕೊಣ್ಣವರ, ನಾಗಭೂಷಣ ಬೆಳವಡಿ, ಎನ್.ವೈ. ಜೋಗಿ, ಎಂ.ಎನ್. ಹುಲಕೋಟಿ, ಎ.ಎ. ನವಲಗುಂದ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಧನ್ನೂರ ಹೇಳಿದರು.

ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ ಮಾತನಾಡಿ, ಈ ಕೃಷಿಗೋಷ್ಠಿ ಇಲ್ಲಿ ನಡೆಯುವದಕ್ಕಿಂತ ಮುಂಚೆ ರೋಟರಿ ಭವನದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ಜರುಗಲಿದೆ. ಅದರಲ್ಲಿ ಎಲ್ಲ ರೈತರೂ ಪಾಲ್ಗೊಳ್ಳಬೇಕೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎ.ಆರ್. ಮಲ್ಲನಗೌಡ್ರ, ಕಳಕನಗೌಡ ಪೊಲೀಸ್‌ಪಾಟೀಲ, ಮೈಲಾರಪ್ಪ ಚಳ್ಳಮರದ, ಸೋಮಶೇಖರ ಲಕ್ಕನಗೌಡ್ರ, ವೀರಪ್ಪ ಜಿರ್ಲ, ಅಲ್ಲಾಭಕ್ಷಿ ನದಾಫ್ ಸೇರಿದಂತೆ ಇನ್ನೂ ಅನೇಕ ಮುಖಂಡರು, ಸ್ಮರಣೋತ್ಸವ ಸಮಿತಿಯ ಸದಸ್ಯರಿದ್ದರು.

ಪುಣ್ಯ ಸ್ಮರಣೋತ್ಸವ ಸಮಿತಿಯ ಅಧ್ಯಕ್ಷ ಎಂ.ಎಸ್. ದಢೇಸೂರಮಠ ಮಾತನಾಡಿ, ಕೃಷಿ ಪ್ರಧಾನವಾದ ನಮ್ಮ ಭಾಗದಲ್ಲಿನ ರೈತರಿಗೆ ಅನುಕೂಲವಾಗಲೆಂದು ಈ ಕೃಷಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಸರಕಾರದಿಂದ ಕೃಷಿಕರಿಗೆ ಯಾವ ಯಾವ ಲಾಭಗಳಿವೆ ಎಂಬುದರ ಬಗ್ಗೆ ಈ ಗೋಷ್ಠಿಯಲ್ಲಿ ಉಪನ್ಯಾಸಕರು ವಿವರವಾದ ವಿವರಣೆಗಳನ್ನು ನೀಡಲಿದ್ದು, ಈ ಭಾಗದ ಕೃಷಿಕರು ಅಂದಿನ ಕೃಷಿಗೋಷ್ಠಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img