HomeGadag Newsಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಮ್ಯಾರಥಾನ್

ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಮ್ಯಾರಥಾನ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಯುವಾ ಬ್ರಿಗೇಡ್, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಟಾರ್ಗೆಟ್ ಫಾರ್ ಪಿಓಕೆ ಮ್ಯಾರಥಾನ್ ಅಭಿಯಾನ ಮುನ್ಸಿಪಲ್ ಮೈದಾನದಿಂದ ಆರಂಭವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಬ್ರಿಗೇಡ್ ಸಂಚಾಲಕ ಮಂಜುನಾಥ್ ಜಕ್ಕಲಿ, 1999ರಲ್ಲಿ ಭಾರತ-ಪಾಕ್ ನಡುವೆ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶವು ಗೆಲುವು ಸಾಧಿಸಿ ಇಂದಿಗೆ 25 ವರ್ಷಗಳಾದವು. ಈ ಗೌರವದ ಸ್ಮರಣಾರ್ಥ ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವನ್ನು ಆಚರಿಸಲಾಗುತ್ತಿದೆ ಎಂದರು.

ಉಪನ್ಯಾಸಕ ಪಾಂಡು ಚವ್ಹಾಣ, ಯುವ ಬ್ರಿಗೇಡ್ ಕಾರ್ಯಕರ್ತ ವಿನಾಯಕ ಹೊರಕೇರಿ, ಮಂಜು ಹಿಂಡಿ ಮಾತನಾಡಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವಿರಯೋಧರಾದ ಮಲ್ಲೇಶಪ್ಪ ಕೊಣ್ಣೂರ, ಮಲ್ಲಿಕಾರ್ಜುನ ಎಂ, ವೀರಣ್ಣ ಚೆಕರೆಡ್ಡಿ, ರವೀಂದ್ರ, ಇಂದಿರಾ ಹೆಬಸುರ, ಎನ್.ಆರ್. ದೇವಾಂಗಮಠ, ಚೆನ್ನಪ್ಪ, ಶಂಕ್ರಪ್ಪ, ವೆಂಕಪ್ಪ, ಯುವಾ ಬ್ರಿಗೇಡ್‌ನ ಪ್ರಮುಖರಾದ ಕುಮಾರ ಜಕ್ಕಲಿ, ಮಂಜು ಜಕ್ಕಲಿ, ವಿನಾಯಕ ಮಾದಗುಂಡಿ, ಬಸು ಗವಿಮಠ, ವಿನಾಯಕ ಹೊರಕೇರಿ, ಸಂಗಮೇಶ ಹಡಪದ್, ರವಿ ಕರ್ಚಣ್ಣವರ ಸೇರಿದಂತೆ ನಿವೃತ್ತ ಯೋಧರು, ಯುವಾ ಬ್ರಿಗೇಡ್‌ನ ಕಾರ್ಯಕರ್ತರು, ವಿದ್ಯಾರ್ಥಿಗಳು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img