HomeBengaluru Newsಬೆಂಗಳೂರು ಮಹಾಲಕ್ಷ್ಮಿ ಕೊಲೆ ಕೇಸ್: ಇಂದು ವೈದ್ಯರಿಂದ ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆ!

ಬೆಂಗಳೂರು ಮಹಾಲಕ್ಷ್ಮಿ ಕೊಲೆ ಕೇಸ್: ಇಂದು ವೈದ್ಯರಿಂದ ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆ!

For Dai;y Updates Join Our whatsapp Group

ಬೆಂಗಳೂರು:- ನಗರದ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರಿಂದ ಇಂದು ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆ ಮಾಡಲಾಗುತ್ತದೆ.

ಮಹಾಲಕ್ಷ್ಮಿ ಮರ್ಡರ್ ಕೇಸ್ ಸಂಬಂಧ ವೈದ್ಯರು ಇಂದು ಮರಣೋತ್ತರ ರಿಪೋರ್ಟ್ ಸಲ್ಲಿಕೆ ಮಾಡುತ್ತಿದ್ದಾರೆ. ಇತ್ತ ರಾಷ್ಟ್ರೀಯ ಮಹಿಳಾ ಆಯೋಗ ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದು. ಎಚ್ಚೆತ್ತ ರಾಜ್ಯ ಮಹಿಳಾ ಆಯೋಗದಿಂದ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ. ಪೋಸ್ಟ್ ಮಾರ್ಟಂ ವರದಿಯಲ್ಲಿ ಭಯಾನಕ ಸತ್ಯಗಳು ಹೊರಬಿದ್ದಿವೆ.

ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಒಂಟಿ ಮಹಿಳೆಯ ಕೊಲೆಯನ್ನ ಭೀಕರವಾಗಿ ಮಾಡಿದ್ದಾನೆ. 52 ಪೀಸ್ ಮಾಡಿರೋ ದೇಹವನ್ನ ಬೌರಿಂಗ್ ಆಸ್ಪತ್ರೆ ವೈದ್ಯರು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಈ ಪ್ರಕರಣ ಅವರಿಗೂ ಕೂಡ ಚಾಲೆಂಜ್ ಆಗಿದ್ದು, ಮರಣೋತ್ತರ ಪರೀಕ್ಷಾ ವರದಿಯನ್ನು ಬೌರಿಂಗ್ ಆಸ್ಪತ್ರೆಯ ವೈದ್ಯರು ಇಂದು ಪೊಲೀಸರಿಗೆ ಒಪ್ಪಿಸಲಿದ್ದಾರೆ. ಪ್ರಾಥಮಿಕ ಮರಣೋತ್ತರ ಪರೀಕ್ಷೆ ಸಲ್ಲಿಕೆ ಮಾಡಲಿದ್ದು ಕೆಲವೊಂದು ಟೆಸ್ಟ್‌ಗಳ ರಿಪೋರ್ಟ್ ಅನ್ನು 10 ದಿನಗಳ ಬಳಿಕ ಸಲ್ಲಿಸಲಿದ್ದಾರೆ.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?
* ಮಹಾಲಕ್ಷ್ಮಿ ಎದೆ ಮತ್ತು ಹೊಟ್ಟೆ ಭಾಗಕ್ಕೆ ಚುಚ್ಚಿರುವ ಹಂತಕ
* ಚುಚ್ಚಿ ಸಾಯಿಸಿದ ಬಳಿಕ ತಲೆಯನ್ನ ಬೇರ್ಪಡಿಸಿದ್ದಾನೆ
* ತಲೆಯನ್ನು ಬೇರ್ಪಡಿಸಿ 52 ಪೀಸ್ ಮಾಡಿರುವ ಕ್ರೂರಿ
* ಮರಣೋತ್ತರ ಪರೀಕ್ಷೆಗೂ ಮುನ್ನ 52 ಪೀಸ್ ಜೋಡಿಸಿದ್ದ ವೈದ್ಯರು
* ಶ್ವಾಸಕೋಶವನ್ನ ಮಾತ್ರ ಬೇರ್ಪಡಿಸಿದ್ದ ಅನ್ನೋದು ಪತ್ತೆ
* ಕರುಳಿನ ಭಾಗ ಮತ್ತು ಹೊಟ್ಟೆ ಭಾಗ ಟೆಸ್ಟ್‌ಗೆ ಕಳಿಸಿರೋ ವೈದ್ಯರು
* ಪ್ರಜ್ಞೆ ತಪ್ಪಿಸಿ ಹತ್ಯೆನಾ? ವಿಷ ಕೊಟ್ಟು ಹತ್ಯೆನಾ? ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ
* ದೇಹದಲ್ಲಿ ವಿಷ ಇದೆಯಾ ಅನ್ನೋ ವರದಿಬರಲು 2-3 ತಿಂಗಳು ಬೇಕು.

ಇನ್ನು ರೇಡಿಯಾಲಜಿಕಲ್, ಸಿಟಿ ಸ್ಕ್ಯಾನ್, ಎಕ್ಸ್ ರೇ, ಟಾಕ್ಸಿಕಲ್ ಎಗ್ಸಾಮಿನೇಷನ್, ಪ್ಯಾಥಲಾಜಿಕಲ್ ಎಗ್ಸಾಮಿನೇಷನ್, ಡಿಎನ್‌ಎ ಟೆಸ್ಟ್‌ಗಳ ವರದಿ ಏನಾಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮಹಾಲಕ್ಷ್ಮಿಯನ್ನು ಪೀಸ್ ಪೀಸ್‌ಆಕೊಂದವ ತಲೆಮರೆಸಿಕೊಂಡಿದ್ದು, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಂತಕ ಪಶ್ಚಿಮ ಬಂಗಾಳದ ಕಡೆ ಎಸ್ಕೇಪ್ ಆಗಿರುವ ಮಾಹಿತಿ ಲಭ್ಯವಾಗಿದೆ. ಹಂತಕನಿಗಾಗಿ ಶೇಷಾದ್ರಿಪುರಂ ಸಬ್ ಡಿವಿಷನ್ ಇನ್ಸ್ಪೆಕ್ಟರ್ ನೇತೃತ್ವದ ತಂಡ ತಲಾಶ್ ನಡೆಸುತ್ತಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img