HomeGadag Newsಕ್ರೀಡಾಕೂಟದಲ್ಲಿ ಮೊರಾರ್ಜಿ ವಿದ್ಯಾರ್ಥಿಗಳ ಸಾಧನೆ

ಕ್ರೀಡಾಕೂಟದಲ್ಲಿ ಮೊರಾರ್ಜಿ ವಿದ್ಯಾರ್ಥಿಗಳ ಸಾಧನೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಬಿಸಿಎನ್ ಆವರಣದಲ್ಲಿರುವ ಶಿರಹಟ್ಟಿ ತಾಲೂಕಾ ವಡವಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಆಟಗಳಲ್ಲಿ ಉತ್ತಮ ಸಾಧನೆ ಮಾಡಿ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗ: ತಾಲೂಕ ಮಟ್ಟ-ಹರೀಶ ಎಲ್ (600 ಮೀ.ಓಟ ಪ್ರಥಮ), ಧನರಾಜ ಎಂ. (ಚಕ್ರ ಎಸೆತ ದ್ವಿತಿಯ), ನೇತ್ರಾ ಎಲ್.(400ಮೀ ಓಟ ದ್ವಿತಿಯ).

ಪ್ರೌಢಶಾಲಾ ವಿಭಾಗ: ತಾಲೂಕು ಮಟ್ಟ-ರಾಜು ಲಮಾಣಿ (ಚಕ್ರ ಎಸೆತ ಪ್ರಥಮ, ಗುಂಡು ಎಸೆತ ದ್ವಿತೀಯ), ಶಂಕ್ರಪ್ಪ ಕಾರಬಾರಿ (200 ಮೀ.ಓಟ ಪ್ರಥಮ, ತ್ರಿಬಲ್ ಜಂಪ್ ದ್ವಿತೀಯ), ಪ್ರಜ್ವಲ್ ಚವ್ಹಾನ್ (ಭಲ್ಲೆ ಎಸೆತ ಪ್ರಥಮ) ಹಾಗೂ ಬಾಲಕರ ಮತ್ತು ಬಾಲಕಿಯರ ವಿಭಾಗದ ಫುಟ್‌ಬಾಲ್ ಗುಂಪು ಆಟದಲ್ಲಿ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನಗಳನ್ನು ಗಳಿಸಿದ್ದಾರೆ.

ಜಿಲ್ಲಾ ಮಟ್ಟದ ಕ್ರೀಡೆ: ಫುಟ್‌ಬಾಲ್ ಪ್ರಾಥಮಿಕ ವಿಭಾಗ ಬಾಲಕಿಯರ ಪ್ರಥಮ ಹಾಗೂ ಬಾಲಕರು ದ್ವಿತೀಯ ಸ್ಥಾನವನ್ನು ಪಡೆದು ವಿಭಾಗ ಮಟ್ಟದಲ್ಲಿ ಆಯ್ಕೆಯಾಗಿದ್ದಾರೆ. ಫುಟ್‌ಬಾಲ್ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ವಿಜಯಪೂರದಲ್ಲಿ ನಡೆದ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿ ಮೆಚ್ಚುಗೆ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img