Homecinemaಹೃದಯಾಘಾತ: ತೆಲುಗಿನ ಖ್ಯಾತ ಹಾಸ್ಯ ನಟನ ಮಗಳು ನಿಧನ!

ಹೃದಯಾಘಾತ: ತೆಲುಗಿನ ಖ್ಯಾತ ಹಾಸ್ಯ ನಟನ ಮಗಳು ನಿಧನ!

For Dai;y Updates Join Our whatsapp Group

ಹೃದಯಾಘಾತದಿಂದ ತೆಲುಗಿನ ಜನಪ್ರಿಯ ಹಾಸ್ಯನಟ ರಾಜೇಂದ್ರ ಪ್ರಸಾದ್ ಅವರ ಮಗಳು ಗಾಯತ್ರಿ ಮೃತಪಟ್ಟಿದ್ದಾರೆ. ರಾಜೇಂದ್ರ ಪ್ರಸಾದ್ ಅವರಿಗೆ ಈಗ ಮಗ ಮಾತ್ರ ಉಳಿದುಕೊಂಡಿದ್ದಾನೆ. ಮಗಳ ಸಾವಿನಿಂದ ರಾಜೇಂದ್ರ ಪ್ರಸಾದ್ ಅವರ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಅನೇಕ ಗಣ್ಯರು ಬಂದು ಸಂತಾಪ ಸೂಚಿಸಿದ್ದಾರೆ.

ಗಾಯತ್ರಿ ಅವರಿಗೆ ಹೃದಯಘಾತ ಆಗುವಾಗ ರಾಜೇಂದ್ರ ಪ್ರಸಾದ್ ಅವರು ಶೂಟಿಂಗ್​ನಲ್ಲಿ ಬ್ಯುಸಿ ಇದ್ದರು. ವಿಚಾರ ತಿಳಿಯುತ್ತಿದ್ದಂತೆ ಅವರು ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರು ತಮ್ಮ ಕೈಲಾದ ಪ್ರಯತ್ನ ಮಾಡಿದ್ದಾರೆ. ಆದರೆ, ಅವರನ್ನು ಬದುಕುಳಿಸಲು ಸಾಧ್ಯವಾಗಲೇ ಇಲ್ಲ. ಗಾಯತ್ರಿ ಅವರ ಅಂತಿಮ ಸಂಸ್ಕಾರ ಇಂದು ನಡೆಯಲಿದೆ. ಹಲವು ಸೆಲೆಬ್ರಿಟಿಗಳು ರಾಜೇಂದ್ರ ಪ್ರಸಾದ್ ನಿವಾಸಕ್ಕೆ ಬಂದು ಧೈರ್ಯ ತುಂಬಿದ್ದಾರೆ.

ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ರಾಜೇಂದ್ರ ಪ್ರಸಾದ್ ವೃತ್ತಿ ಜೀವನ ಆರಂಭಿಸಿದರು. ವರ್ಷಗಳು ಕಳೆದಂತೆ ಅವರಿಗೆ ಬೇಡಿಕೆ ಹೆಚ್ಚುತ್ತಾ ಹೋಯಿತು. ಟಾಲಿವುಡ್​ನ ಖ್ಯಾತ ಹಾಸ್ಯನಟನಾಗಿ ಅವರು ಗುರುತಿಸಿಕೊಂಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img