HomeKarnataka Newsಕೈ ಕೊಟ್ಟ ಪ್ರೇಯಸಿ: ಡೆತ್ ನೋಟ್ ಬರೆದಿಟ್ಟು ಪ್ರಿಯಕರ ಸೊಸೈಡ್!

ಕೈ ಕೊಟ್ಟ ಪ್ರೇಯಸಿ: ಡೆತ್ ನೋಟ್ ಬರೆದಿಟ್ಟು ಪ್ರಿಯಕರ ಸೊಸೈಡ್!

For Dai;y Updates Join Our whatsapp Group

Spread the love

ಕಲಬುರ್ಗಿ:- ಜಿಲ್ಲೆಯ ಕಮಲಾಪುರ ತಾಲೂಕಿನ ಮಡಕಿ ಗ್ರಾಮದಲ್ಲಿ 13 ವರ್ಷ ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆ ಮದುವೆ ಆಗಿದ್ದಕ್ಕೆ ಮನನೊಂದು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

32 ವರ್ಷದ ದೇವೇಂದ್ರಪ್ಪ ಕಲಕೇರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಡಕಿ ಗ್ರಾಮದ ಯುವತಿಯೋರ್ವಳನ್ನು ದೇವೇಂದ್ರಪ್ಪ ಪ್ರೀತಿಸಿದ್ದ.

ಕಳೆದ ನಾಲ್ಕು ವರ್ಷದ ಹಿಂದೆ ಬೇರೊಬ್ಬನೊಂದಿಗೆ ಯುವತಿ ಮದುವೆಯಾಗಿ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಚಿಕ್ಕಪ್ಪ ಹಾಗೂ ಗಂಡನ ಜೊತೆ ವಾಸವಾಗಿದ್ದಳು.

ಆಗಾಗ ದೇವೇಂದ್ರನಿಗೆ ಫೋನ್ ಮಾಡಿ ತನ್ನನ್ನು ಮದುವೆ ಆಗದೆ ಹೋದರೆ ಜೀವ ಕಳೆದುಕೊಳ್ಳುವುದಾಗಿ ದುಂಬಾಲು ಬೀಳುತ್ತಿದ್ದಳು ಎಂದು ದೇವೇಂದ್ರಪ್ಪ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ.

ಹೀಗಾಗಿ, ಆತ ಬೆಂಗಳೂರಿಗೆ ತೆರಳಿ ಯುವತಿಯನ್ನು ಭೇಟಿ ಮಾಡಲು ಆಕೆಯ ಮನೆಗೆ ಹೋದಾಗ ಆಕೆ ಇದುವರೆಗೆ ತನ್ನ ಚಿಕ್ಕಪ್ಪ ಎಂದು ಪರಿಚಯಿಸಿದ್ದ ವ್ಯಕ್ತಿಯೊಂದಿಗೆ ಮಲಗಿರುವುದನ್ನು ನೋಡಿ ತಾನು ಆಘಾತಗೊಂಡಿದ್ದಾಗಿಯೂ, ನಂತರ ನಡೆದ ಮಾತಿನ ಚಕಮಕಿ ವೇಳೆ ಆ ವ್ಯಕ್ತಿಗೆ ಚಾಕು ಇರಿದ ಕಾರಣಕ್ಕಾಗಿ ತನ್ನ ಮೇಲೆ ಸ್ಥಳದಲ್ಲಿದ್ದ ಕೆಲವರು ಹಲ್ಲೆ ನಡೆಸಿದ್ದರಿಂದ ತಾನು ಅಲ್ಲಿಂದ ಓಡಿ ಬಂದಿದ್ದಾಗಿಯೂ ಪತ್ರದಲ್ಲಿ ದಾಖಲಿಸಿದ್ದಾನೆ.

ಈ ಮಧ್ಯೆ, ತನ್ನ ಪ್ರೇಯಸಿ ಹೀಗೆ ಅನ್ಯ ವ್ಯಕ್ತಿಯೊಂದಿಗೆ ಮಲಗಿರುವುದನ್ನು ಕಣ್ಣಾರೆ ಕಂಡ ಬಳಿಕ ತಾನು ಬೇರೊಂದು ಹುಡುಗಿಯನ್ನು ಮದುವೆಯಾಗುವುದಾಗಿ ಆಕೆಗೆ ತಿಳಿಸಿದ್ದಾಗಿಯೂ, ಇದಕ್ಕೆ ಸಹಮತಿ ವ್ಯಕ್ತಪಡಿಸದ ಆಕೆ ತಾನು ಪೊಲೀಸ್ ಕಂಪ್ಲೆಂಟ್ ನೀಡುವುದಾಗಿ ಬೆದರಿಕೆ ಹಾಕಿದ್ದಾಗಿಯೂ ಡೆತ್ ನೋಟ್ ನಲ್ಲಿ ದೇವೇಂದ್ರಪ್ಪ ಉಲ್ಲೇಖಿಸಿದ್ದಾನೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!