ಕಲಬುರಗಿ: ಬೇಸಿಗೆ ಆರಂಭವಾದ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ದಾಖಲೆ ಮಟ್ಟ ತಲುಪಿದೆ.
ಏಪ್ರಿಲ್ ತಿಂಗಳಲ್ಲಿಯೇ ಗರಿಷ್ಠ ತಾಪಮಾನ 44ರಿಂದ 45.05 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿದೆ. ಕಳೆದ 25 ವರ್ಷಗಳಲ್ಲಿ ಕಂಡ ಅತ್ಯಧಿಕ ಬಿಸಿಲು ಇದಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ ವೇಳೆಗೆ ಸೂರ್ಯನ ತಾಪಕ್ಕೆ ಭೂಮಿ ಕೆಂಡದಂತಾಗುತ್ತಿದ್ದು, ಹೊರಗೆ ಸಂಚಾರ ಕಷ್ಟಕರವಾಗಿದೆ. ತೀವ್ರ ಬಿಸಿಗಾಳಿಯಿಂದ ಜನರು ತಂಪು ಪಾನೀಯಗಳತ್ತ ಮೊರೆ ಹೋಗುತ್ತಿದ್ದಾರೆ.



