Home Karnataka News ಭರವಸೆ ಇದ್ದರೆ ಭವಿಷ್ಯದ ದಾರಿ ಕಾಣುತ್ತದೆ: ಶ್ರೀ ರಂಭಾಪುರಿ ಜಗದ್ಗುರುಗಳು

ಭರವಸೆ ಇದ್ದರೆ ಭವಿಷ್ಯದ ದಾರಿ ಕಾಣುತ್ತದೆ: ಶ್ರೀ ರಂಭಾಪುರಿ ಜಗದ್ಗುರುಗಳು

0
ಭರವಸೆ ಇದ್ದರೆ ಭವಿಷ್ಯದ ದಾರಿ ಕಾಣುತ್ತದೆ: ಶ್ರೀ ರಂಭಾಪುರಿ ಜಗದ್ಗುರುಗಳು
Spread the love

ವಿಜಯಸಾಕ್ಷಿ ಸುದ್ದಿ, ಕೊಲನಪಾಕ: ಸಮಯ, ಸ್ನೇಹ, ಆರೋಗ್ಯ ಇವುಗಳಿಗೆ ಬೆಲೆ ಕಟ್ಟಲಾಗುವುದಿಲ್ಲ. ಕಳೆದುಕೊಂಡಾಗಲಷ್ಟೇ ಅವುಗಳ ನಿಜವಾದ ಬೆಲೆ ತಿಳಿಯುತ್ತದೆ. ಬದುಕಲ್ಲಿ ಭರವಸೆ ಇದ್ದರೆ ಭವಿಷ್ಯದ ದಾರಿ ಕಾಣುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶನಿವಾರ ಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ತೆಲಂಗಾಣ ರಾಜ್ಯದ ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಖರ್ಚು ಮಾಡುವ ಮುನ್ನ ಗಳಿಸು. ಪ್ರಾರ್ಥಿಸುವ ಮೊದಲು ನಂಬಿಕೆ ಇಡು. ಇವು ಸುಂದರ ಬದುಕಿನ ಸೂತ್ರಗಳು. ಗಳಿಕೆ ಮತ್ತು ನಂಬಿಕೆ ಇವೆರಡನ್ನು ಅಳವಡಿಸಿಕೊಂಡು ಬಾಳಿದರೆ ಜೀವನ ಸಾರ್ಥಕ. ಶ್ರೀಮಂತ ಆಹಾರದಲ್ಲಿ ರುಚಿ ಹುಡುಕುತ್ತಾನೆ. ಹಸಿದ ಬಡವ ಆಹಾರದಲ್ಲಿ ದೇವರನ್ನು ಕಾಣುತ್ತಾನೆ. ಸತ್ಯದ ದಾರಿ ಬಲು ಕಷ್ಟ. ಆದರೆ ಆ ದಾರಿ ನಮ್ಮನ್ನು ಸೋಲಲು ಬಿಡುವುದಿಲ್ಲ. ರೂಪ ಮತ್ತು ರೂಪಾಯಿ ಎಂದೂ ಶಾಶ್ವತವಲ್ಲ. ಮನುಷ್ಯನ ಒಳ್ಳೆಯ ಗುಣ ಒಂದೇ ಶಾಶ್ವತವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮ ಸಂಹಿತೆಯಲ್ಲಿ ಬೋಧಿಸಿದ್ದಾರೆ.

ಮಳಲಿ ಸಂಸ್ಥಾನಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಕೊಲನಪಾಕ ಕ್ಷೇತ್ರದ ಹಿರಿಮೆಯನ್ನು ಕುರಿತು ಉಪದೇಶಾಮೃತವನ್ನಿತ್ತರು. ರಾಯಚೂರು ಶಾಂತಮಲ್ಲ ಶಿವಾಚಾರ್ಯರು, ತೆಂಡೇಕೆರೆ ಗಂಗಾಧರ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಜವಳಿ ಗಂಗಾಧರ ಶ್ರೀಗಳು, ಲಿಂಗಸುಗೂರು ಮಾತಾ ನಂದಿಕೇಶ್ವರಿ ಅಮ್ಮನವರು ಉಪಸ್ಥಿತರಿದ್ದರು.

ಟ್ರಸ್ಟಿನ ಕಾರ್ಯದರ್ಶಿ ಅಣ್ಣಾರಾವ್ ಬಿರಾದಾರ ಸದಸ್ಯರಾದ ಗುರುಪಾದಪ್ಪ ಕಿಣಗಿ, ಅಮೃತಪ್ಪ ಮಲಕಪ್ಪಗೌಡರ, ಬಾರ್ಸಿ, ಫಂಡರಪುರ, ಸೋಲಾಪುರ, ಕಲಬುರ್ಗಿ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಪ್ರಾತಃಕಾಲ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗ, ಶ್ರೀ ವೀರಭದ್ರಸ್ವಾಮಿ, ಚಂಡಿಕಾAಬಾ ದೇವಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ವಿಶೇಷ ಪೂಜೆ ಸಲ್ಲಿಸಿದರು. ಕಲಬುರ್ಗಿ ಶ್ರೀನಿವಾಸಪುರದ ಗಿರಿಯಪ್ಪ ಮುತ್ಯಾ ಬಂದ ಎಲ್ಲ ಭಕ್ತ ಸಮುದಾಯಕ್ಕೆ ಅನ್ನ ದಾಸೋಹ ಸೇವೆ ಸಲ್ಲಿಸಿದರು. ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು.

ಏನು ಹೇಳಬೇಕೆನ್ನುವುದು ಜ್ಞಾನ. ಹೇಗೆ ಹೇಳಬೇಕೆಂಬುದು ವ್ಯಕ್ತಿತ್ವ. ಎಷ್ಟು ಹೇಳಬೇಕೆನ್ನುವುದು ಕೌಶಲ್ಯ. ಹೇಳಬೇಕೋ ಬೇಡವೋ ಎನ್ನುವುದು ವಿವೇಕ. ಮನೆ ಚಿಕ್ಕದಾದರೂ ಮನಸ್ಸು ದೊಡ್ಡದಾಗಿರಬೇಕು. ವಿಶ್ವ ಬಂಧುತ್ವದ ಶಾಂತಿ-ಸಾಮರಸ್ಯದ ಸಂದೇಶ ಅನುಗ್ರಹಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾಡಿದ ಸತ್ರ್ಕಾಂತಿಯನ್ನು ಯಾರೂ ಎಂದಿಗೂ ಮರೆಯಲಾಗದೆಂದು ರಂಭಾಪುರಿ ಶ್ರೀಗಳು ತಿಳಿಸಿದರು.


Spread the love

LEAVE A REPLY

Please enter your comment!
Please enter your name here