Home Gadag News ಮತಾಂಧರ ಮೇಲೆ ಕ್ರಮ ಕೈಗೊಳ್ಳಿ: ವಿಶ್ವಹಿಂದೂ ಪರಿಷತ್-ಭಜರಂಗದಳದಿಂದ ಮನವಿ

ಮತಾಂಧರ ಮೇಲೆ ಕ್ರಮ ಕೈಗೊಳ್ಳಿ: ವಿಶ್ವಹಿಂದೂ ಪರಿಷತ್-ಭಜರಂಗದಳದಿಂದ ಮನವಿ

0
ಮತಾಂಧರ ಮೇಲೆ ಕ್ರಮ ಕೈಗೊಳ್ಳಿ: ವಿಶ್ವಹಿಂದೂ ಪರಿಷತ್-ಭಜರಂಗದಳದಿಂದ ಮನವಿ
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ರಾಜಕೀಯ ಪಕ್ಷವಾಗಿರುವ ಎಸ್.ಡಿ.ಪಿ.ಐ. ಪಕ್ಷದ ಪ್ರಮುಖರ ಕುಮ್ಮಕ್ಕಿನಿಂದ ಹಿಂದೂಗಳ ಮೇಲೆ ಹಲ್ಲೆ, ಗೋಹತ್ಯೆ, ಮತಾಂತರ, ಲವ್‌ಜಿಹಾದ್‌ಗೆ ಪ್ರಚೋದನೆ ನೀಡುತ್ತಿರುವುದನ್ನು ಖಂಡಿಸಿ ಗದಗ ಜಿಲ್ಲಾ ವಿಶ್ವಹಿಂದೂ ಪರಿಷತ್, ಭಜರಂಗದಳದ ವತಿಯಿಂದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಜೋಡು ಮಾರುತಿ ದೇವಸ್ಥಾನದ ಹತ್ತಿರ ಕ್ಷುಲಕ ಕಾರಣಕ್ಕೆ 4 ಜನ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಕುಕೃತ್ಯ ಮಾಸುವ ಮುನ್ನವೇ ಹಿಂದೂಗಳ ಮೇಲೆ ಮತ್ತೊಂದು ಹಲ್ಲೆ ಆಗಿದ್ದನ್ನು ವಿಶ್ವಹಿಂದೂ ಪರಿಷತ ಭಜರಂಗದಳ ಉಗ್ರವಾಗಿ ಖಂಡಿಸುತ್ತದೆ.

ನಗರದ ಅನಿಲ ಮುಳ್ಳಾಳ ಹಾಗೂ ಸಹೋದರರು ತಮ್ಮ ಸಹೋದರಿಯನ್ನು ಮುಸ್ಲಿಂ ಗೂಂಡಾ ಯುವಕರು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದನ್ನೇ ನೆಪ ಮಾಡಿಕೊಂಡು 10-20 ಮತಾಂಧರು ಒಟ್ಟಾಗಿ ಹಿಂದೂಗಳ ಮೇಲೆ ದಾಳಿ ಮಾಡಿದ್ದಲ್ಲದೆ ಅನಿಲರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು, ಜಗಳ ಬಿಡಿಸಲು ಬಂದ ದಲಿತ ಯುವಕ ಮಂಜುನಾಥ ಬಂಡಿವಡ್ಡರಿಗೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದನ್ನು ವಿಶ್ವ ಹಿಂದೂ ಪರಿಷತ ಭಜರಂಗದಳ ಉಗ್ರವಾಗಿ ಖಂಡಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಉಪಾಧ್ಯಕ್ಷ ವೀರಣ್ಣ ಹೇಮಾದ್ರಿ, ರಾಣಿ ಆರ್.ಚಂದಾವರಿ, ಜಿಲ್ಲಾ ಕಾರ್ಯದರ್ಶಿ ಸಂಜೀವ ಜೋಶಿ, ಕೋಶಾಧ್ಯಕ್ಷ ಮಾರುತಿ ಪವಾರ, ಗದಗ (ಗ್ರಾ) ಅಧ್ಯಕ್ಷ ವಿರೇಶ ಮಡಿವಾಳರ, ಗಜೇಂದ್ರಗಡ ತಾಲೂಕಾ ಕಾರ್ಯದರ್ಶಿ ಪರಶುರಾಮ ಬಾವಿಕಟ್ಟಿ, ಪ್ರಸಾದ ಬಡಿಗೇರ, ಭಜರಂಗ ಸಂಯೋಜಕ ಪ್ರಮೋದ ಚವ್ಹಾಣ, ಗೋರಕ್ಷಾ ಪ್ರಮುಖ ಅಶೋಕ ಜಕ್ಕಲಿ, ಸತ್ಸಂಗ ಪ್ರಮುಖ ನಾಗರಾಜ ಜಾಡರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ರೀತಿ ಜಿಲ್ಲೆಯಲ್ಲಿ ಕೋಮುದಳ್ಳುರಿ ಸೃಷ್ಟಿಸಿ ತನ್ನ ಪ್ರಭಾವ ಬೀರಲು ಹೊರಟಿರುವ ಎಸ್.ಡಿ.ಪಿ.ಐ. ಪ್ರಮುಖರನ್ನು ಬಂಧಿಸಿ ಉಗ್ರಕ್ರಮ ಕೈಗೊಳ್ಳಬೇಕು. ಹಿಂದೂಗಳ ಮಠ-ಮಂದಿರಗಳಿಗೆ, ಹಿಂದೂ ಯುವತಿಯರಿಗೆ ಇಂತಹ ಮತಾಂಧ ಶಕ್ತಿಗಳಿಂದ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.


Spread the love

LEAVE A REPLY

Please enter your comment!
Please enter your name here