HomeEntertainmentಲಕ್ಷ ಲಕ್ಷ ಹಣ ವಂಚನೆ ಆರೋಪ: ಗೋಲ್ಡ್‌ ಸುರೇಶ್‌ ಹೇಳಿದ್ದೇನು?

ಲಕ್ಷ ಲಕ್ಷ ಹಣ ವಂಚನೆ ಆರೋಪ: ಗೋಲ್ಡ್‌ ಸುರೇಶ್‌ ಹೇಳಿದ್ದೇನು?

For Dai;y Updates Join Our whatsapp Group

Spread the love

ಬಿಗ್‌ ಬಾಸ್‌ ಖ್ಯಾತಿಯ ಗೋಲ್ಡ್‌ ಸುರೇಶ್‌ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಗೋಲ್ಡ್‌ ಸುರೇಶ್‌ ವಿರುದ್ಧ ಕೇಬಲ್‌ ಚಾನೆಲ್‌ ಸೆಟ್‌ಅಪ್‌ ಮಾಡಿಕೊಡುವುದಾಗಿ ಹೇಳಿ ಲಕ್ಷ ಲಕ್ಷ ವಂಚನೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋಲ್ಡ್‌ ಸುರೇಶ್., ಇದು ಊಹಾಪೋಹದ ಆರೋಪ. ಅಧಿಕೃತವಾಗಿ ನನ್ನ ಮೇಲೆ‌ ಎಲ್ಲೂ ಎಫ್‌ಐಆರ್ ಆಗಿಲ್ಲ. 2018ರಲ್ಲಿ ನನ್ನ ಸ್ನೇಹಿತನ ಮೂಲಕ ಆ ವ್ಯಕ್ತಿ ಪರಿಚಯ ಆಗಿದ್ರು. ಅವರ ಕೆಲಸ ಮಾಡಿಕೊಟ್ಟಿದ್ದೀನಿ. ನಾನು ಯಾರಿಗೂ ಯಾವುದೇ ಹಣ ಕೊಡಬೇಕಿಲ್ಲ. ಸುಳ್ಳು ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.

ನಾನೊಬ್ಬ ಸಿವಿಲ್ ಕಂಟ್ರ್ಯಾಕ್ಟರ್‌, ಬ್ಯುಸಿನೆಸ್ ಮೆನ್, ಬೇರೆ ಬೇರೆ ವ್ಯವಹಾರ ಮಾಡ್ತಿನಿ. ಅವರ ಹತ್ರ ದಾಖಲೆ ಇದ್ದಿದ್ರೆ, ಈ ಆರೋಪ ಮೊದಲೇ ಮಾಡಬೇಕಿತ್ತು. ಬಿಗ್ ಬಾಸ್‌ನಿಂದ ಹೊರಗೆ ಬಂದಮೇಲೆ ಈಗ್ಯಾಕೆ ಮಾಡ್ತಿದ್ದಾರೆ? ಇದು ನಡೆದಿರೋದು 2018 ರಲ್ಲಿ ಎಂದ ಮೇಲೆ ಇಷ್ಟು ದಿನ ಏನ್ ಮಾಡ್ತಿದ್ರು? ಅವರ ಹತ್ರ ದಾಖಲೆ ಇದ್ರೆ ಹೋಗಿ ದೂರು ಕೊಡಲಿ, ಕೇಸ್ ಹಾಕಲಿ, ಇದು ದುಡ್ಡಿಗಾಗಿ ಮಾಡಿರೋ ಕೆಲಸ ಅಷ್ಟೇ. ನಾನ್ ಕದ್ದು ಮುಚ್ಚಿ ಓಡಾಡ್ತಿಲ್ಲ, ಎಲ್ಲರಿಗೂ ಪರಿಚಿತ ಎಂದು ಗೋಲ್ಡ್‌ ಸುರೇಶ್‌ ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

ಗೋಲ್ಡ್‌ ಸುರೇಶ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮೈನುದ್ದೀನ್ ಹೇಳುತ್ತಿದ್ದಾರೆ. ನಮ್ಮಿಂದ ಪಡೆದ 7,50,000ದಲ್ಲಿ ಕೇವಲ 2,50,000 ಹಣ ಕೊಟ್ಟಿದ್ದಾರೆ. ಉಳಿದ ಹಣ ಕೇಳಿದ್ರೆ ಯಾವ ಹಣವೂ ಕೊಡೋದಿಲ್ಲ ಅತ್ತಿದ್ದಾರೆ. ಫರ್ನಿಚರ್​ಗಾಗಿ ಖರ್ಚು ಮಾಡಿದ್ದೇನೆ ಎಂದು ಹೇಳಿದ್ದಾರೆ. ಆದ್ರೆ, ಇನ್ನುಳಿದ ಐದು ಲಕ್ಷದ ಕೇಳಿದ್ರೆ ಫರ್ನಿಚರ್ ಮಾಡಿದ್ದೀವಿ ಅಂತ ಹೇಳ್ತಿದ್ದಾರೆ. ಆದ್ರೆ ಐದು ಲಕ್ಷದ ಕೆಲಸ ಗೋಲ್ಡ್ ಸುರೇಶ್ ಮಾಡಿಲ್ಲ ಎಂದು ಮೈನುದ್ದೀನ್​ ದೂರು‌ ನೀಡಲು ಮುಂದಾಗಿದ್ದಾರೆ. ಒಟ್ಟು 17 ಲಕ್ಷಕ್ಕೆ ಸೆಟಪ್ ಮಾಡಿಕೊಡುವುದಾಗಿ ಹೇಳಿ ಏಳೂವರೆ ಲಕ್ಷ ಹಣ ಪಡೆದಿದ್ದಾರೆ. ಮುಂಗಡವಾಗಿ 7,50,000 ಪಡೆದು ಅರೆಬರೆ ಕೆಲಸ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅಲ್ಲದೇ ಗೋಲ್ಡ್​ ಸುರೇಶ್​ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

ಘಟನೆ ಹಿನ್ನೆಲೆ: ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮೈನುದ್ದಿನ್ ಎಂಬ ಯುವಕನ ಜೊತೆ ಗೋಲ್ಡ್​ ಸುರೇಶ್ ಅವರು ಕೇಬಲ್ ಚಾನೆಲ್ ಸೆಟಪ್ ಮಾಡಿಕೊಡುವುದಾಗಿ ಹೇಳಿ​ ಬರೋಬ್ಬರಿ 14 ಲಕ್ಷಕ್ಕೆ ಅಗ್ರೀಮೆಂಟ್ ಮಾಡಿಕೊಂಡಿದ್ದರಂತೆ. ಸ್ಟುಡಿಯೋ ನಿರ್ಮಾಣ ಹಾಗೂ ಉಪಕರಣಗಳ ಖರೀದಿಗೆ ಸಂಬಂಧಿಸಿ 2017ರಲ್ಲೇ ಗೋಲ್ಡ್ ಸುರೇಶ್ ಜೊತೆ 14 ಲಕ್ಷ ರೂ.ಗೆ ಒಪ್ಪಂದ ಮಾಡಲಾಗಿತ್ತಂತೆ. ಇದರ ಭಾಗವಾಗಿ ಪ್ರಾರಂಭದಲ್ಲಿ 4 ಲಕ್ಷ ರೂ. ಮುಂಗಡವಾಗಿ ನೀಡಲಾಗಿತ್ತು. ನಂತರ ಹಂತ ಹಂತವಾಗಿ 7 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಮೈನುದ್ದಿನ್ ಆರೋಪಿಸಿದ್ದಾರೆ. ಆದರೆ, ಕೆಲಸವನ್ನು ಅರ್ಧಕ್ಕೆ ಬಿಟ್ಟಿದ್ದು ಹಣ ಕೂಡ ವಾಪಸ್‌ ಮಾಡಿಲ್ಲ ಎಂದು ಆರೋಪಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!