HomeLife Styleಮೆಂತ್ಯ ಸೇವನೆಯಿಂದ ಆಗುವ ಅಡ್ಡ ಪರಿಣಾಮಗಳೇನು ಗೊತ್ತಾ..?

ಮೆಂತ್ಯ ಸೇವನೆಯಿಂದ ಆಗುವ ಅಡ್ಡ ಪರಿಣಾಮಗಳೇನು ಗೊತ್ತಾ..?

For Dai;y Updates Join Our whatsapp Group

Spread the love

ನಮ್ಮ ಅಡುಗೆ ಮನೆಯಲ್ಲಿ ಸದಾ ಇರುವ ಮೆಂತ್ಯ ಕಾಳುಗಳು ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಆಹಾರದಲ್ಲಿ ಮೆಂತ್ಯವನ್ನು ನಿಯಮಿತವಾಗಿ ಬಳಸುವುದರಿಂದ ರುಚಿ ಜೊತೆಗೆ ಅನೇಕ ಸಮಸ್ಯೆಗಳು ದೂರ ಮಾಡುತ್ತವೆ. ಆದ್ರೆ ಮೆಂತ್ಯದಿಂದ ಕೆಲವರಿಗೆ ಅತಿಸಾರ ಮತ್ತು ಅಜೀರ್ಣದಂತಹ ಅಡ್ಡಪರಿಣಾಮಗಳು ಉಂಟಾಗುತ್ತದೆ.

ಇನ್ನು ಕೆಲವರಲ್ಲಿ ಹಸಿವಿನ ಪ್ರಮಾಣ ಕಡಿಮೆಯಾಗುತ್ತದೆ. ನೀವು ದಪ್ಪಗಾಗಲು ಬಯಸಿದ್ದರೆ ಅಥವಾ ಹಸಿವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಮೆಂತ್ಯ ಸೇವನೆ ಮಾಡಬೇಡಿ. ನೀವು ಮಧುಮೇಹ ಔಷಧಿ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಇತರ ಸಪ್ಲಿಮೆಂಟ್​​ಗಳನ್ನು ತೆಗೆದುಕೊಳ್ಳುತ್ತಿದ್ದರೆ ಮೆಂತ್ಯವನ್ನು ಎಚ್ಚರಿಕೆಯಿಂದ ಬಳಸಬೇಕು.

ಅನೇಕ ಔಷಧಿಗಳು ಮತ್ತು ಗಿಡಮೂಲಿಕೆಗಳಂತೆ ಮೆಂತ್ಯದಿಂದ ಕೂಡ ಕೆಲವರಿಗೆ ಅಡ್ಡಪರಿಣಾಮಗಳು ಉಂಟಾಗುತ್ತದೆ. ಮೆಂತ್ಯ ಸೇವನೆಯಿಂದ ಕೆಲವರು ಅತಿಸಾರ, ಗ್ಯಾಸ್ಟ್ರಿಕ್, ವಾಕರಿಕೆ ಅಥವಾ ವಾಂತಿ, ಹೊಟ್ಟೆ ನೋವು ಹೀಗೆ ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬಹುದು.

ಇನ್ನು ಕೆಲವರಿಗೆ ಮೆಂತ್ಯದಿಂದ ಅಲರ್ಜಿ ಉಂಟಾಗಬಹುದು. ಇದರಿಂದ ದೇಹದಲ್ಲಿ ಊತ, ತುರಿಕೆ, ದದ್ದು ಮತ್ತು ಉಸಿರಾಟದ ತೊಂದರೆಗಳ ಲಕ್ಷಣಗಳನ್ನು ಅನುಭವಿಸಬಹುದು. ಕಡಲೆಕಾಯಿ, ಕಡಲೆ, ಅಥವಾ ದ್ವಿದಳ ಧಾನ್ಯದ ಅಲರ್ಜಿಯನ್ನು ನೀವು ಅನುಭವಿಸುತ್ತಿದ್ದರೆ ಮೆಂತ್ಯದಿಂದಲೂ ಸಮಸ್ಯೆ ಎದುರಾಗಬಹುದು.

ನೀವು ಹೈಪೋಕಾಲೆಮಿಯಾ (ಕಡಿಮೆ ಪೊಟ್ಯಾಸಿಯಮ್) ಹೊಂದಿದ್ದರೆ, ಮೆಂತ್ಯ ಸೇವನೆಯಿಂದ ನೀವು ಸ್ನಾಯು ದೌರ್ಬಲ್ಯ ಅಥವಾ ಸೆಳೆತ, ಅಸಹಜ ಹೃದಯ ಬಡಿತದ ಲಕ್ಷಣಗಳನ್ನು ಅನುಭವಿಸಬಹುದು. ಕೆಲವರಿಗೆ ಚರ್ಮದ ಮೇಲೆ ಗುಳ್ಳೆಗಳು ಉಂಟಾಗಬಹುದು. ಇಂತಹ ಸಮಯದಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಮರೆಯಬೇಡಿ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!