ಕಲಬುರಗಿ: ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನ ಮದುವೆಯಾದರೆ 5 ಲಕ್ಷ ರೂ. ಕೊಡುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಕಲಬುರಗಿ ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ದ ಎಫ್ಐಆರ್ ದಾಖಲಾಗಿದೆ.
ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಖಿದ್ಮತ್–ಎ–ಮಿಲ್ಲತ್ ಕಮಿಟಿ ಅಧ್ಯಕ್ಷ ಜುನೈದ್ ಖುರೇಶಿ ದೂರು ದಾಖಲಿಸಿದ್ದು, ಹಿಂದೂ ಯುವಕರಿಗೆ ಪ್ರಚೋದನೆ ನೀಡಿದ ಆರೋಪ ಮಾಡಿದ್ದಾರೆ.
ದೂರು ಆಧಾರವಾಗಿ ಭಾರತೀಯ ದಂಡ ಸಂಹಿತೆಯ ಕಲಂ 196, 299, 353(1)(c), 353(2) ಅಡಿ ಎಫ್ಐಆರ್ ದಾಖಲಾಗಿದೆ. ದೂರಿನಲ್ಲಿ, ಈ ಹೇಳಿಕೆ ಒಂದು ಸಮುದಾಯವನ್ನು ವಿಭಜಿಸುವ ಹಾಗೂ ದ್ವೇಷ ಉಂಟುಮಾಡುವ ಹೇಳಿಕೆ ಎಂದು ಉಲ್ಲೇಖಿಸಲಾಗಿದೆ.



