HomeBengaluru News2 ವರ್ಷದ ಮಗುವಿಗೆ ಅಪರೂಪದ ಶಸ್ತ್ರಚಿಕಿತ್ಸೆ: ಹೊಟ್ಟೆಯಿಂದ 480 ಗ್ರಾಂ ಕೂದಲು ಹೊರತೆಗೆದ ವೈದ್ಯರು!

2 ವರ್ಷದ ಮಗುವಿಗೆ ಅಪರೂಪದ ಶಸ್ತ್ರಚಿಕಿತ್ಸೆ: ಹೊಟ್ಟೆಯಿಂದ 480 ಗ್ರಾಂ ಕೂದಲು ಹೊರತೆಗೆದ ವೈದ್ಯರು!

For Dai;y Updates Join Our whatsapp Group

ಬೆಂಗಳೂರು: ಸಿಲಿಕಾನ್ ಸಿಟಿಯ ಮೆಡಿಕವರ್ ಆಸ್ಪತ್ರೆಯ ವೈದ್ಯರು ಅತ್ಯಂತ ಅಪರೂಪದ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ 2 ವರ್ಷದ ಪುಟ್ಟ ಮಗುವಿನ ಜೀವ ಉಳಿಸಿದ್ದಾರೆ.

ಮಗುವಿನ ಹೊಟ್ಟೆಯೊಳಗೆ ಸಂಗ್ರಹವಾಗಿದ್ದ ಸುಮಾರು 480 ಗ್ರಾಂ ತೂಕದ ಕೂದಲಿನ ಗುಡ್ಡೆ ಹಾಗೂ ರಬ್ಬರ್ ಬ್ಯಾಂಡ್‌ಗಳನ್ನು ಲ್ಯಾಪರೋಸ್ಕೊಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

ವೈದ್ಯಕೀಯವಾಗಿ ಆಹಾರವಲ್ಲದ ವಸ್ತುಗಳನ್ನು ತಿನ್ನುವ ಅಭ್ಯಾಸವನ್ನು ‘ಪೈಕಾ’ (Pica) ಎಂದು ಕರೆಯಲಾಗುತ್ತದೆ. ಈ ಪ್ರಕರಣದಲ್ಲಿ ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಕೂದಲು, ರಬ್ಬರ್ ಬ್ಯಾಂಡ್‌ಗಳು ಹಾಗೂ ಬಲೂನ್ ತುಂಡುಗಳನ್ನು ತಿನ್ನುವ ಅಭ್ಯಾಸವಿತ್ತು. ನಿರಂತರವಾಗಿ ಇವುಗಳನ್ನು ಸೇವಿಸಿದ ಪರಿಣಾಮ ಹೊಟ್ಟೆಯೊಳಗೆ ಕೂದಲಿನ ಗುಡ್ಡೆ ರೂಪಗೊಂಡಿದ್ದು, ಅದು ಸಣ್ಣ ಕರಳಿನವರೆಗೆ ವ್ಯಾಪಿಸಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಗುವಿಗೆ ತೀವ್ರ ಹೊಟ್ಟೆನೋವು, ನಿರಂತರ ವಾಂತಿ ಹಾಗೂ ಆಹಾರ ಸೇವನೆ ಸಂಪೂರ್ಣವಾಗಿ ಕಡಿಮೆಯಾಗಿತ್ತು. ಇದರಿಂದ ಆತಂಕಗೊಂಡ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದರು. ತಪಾಸಣೆ ವೇಳೆ ಹೊಟ್ಟೆ ಮತ್ತು ಕರಳಿನಲ್ಲಿ ದೊಡ್ಡ ಪ್ರಮಾಣದ ತ್ಯಾಜ್ಯದ ರಾಶಿ ಇರುವುದನ್ನು ಸ್ಕ್ಯಾನಿಂಗ್ ಮೂಲಕ ಪತ್ತೆಹಚ್ಚಲಾಯಿತು.

ಸ್ಥಿತಿಯ ಗಂಭೀರತೆಯನ್ನು ಗಮನಿಸಿ ವೈದ್ಯರ ನಾಲ್ಕು ಸದಸ್ಯರ ತಂಡ ತಕ್ಷಣವೇ ಲ್ಯಾಪರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ನಡೆಸಿತು. ಯಶಸ್ವಿ ಕಾರ್ಯಾಚರಣೆಯಲ್ಲಿ 25 ಸೆಂ.ಮೀ ಉದ್ದದ ಹಾಗೂ 480 ಗ್ರಾಂ ತೂಕದ ಬೃಹತ್ ಕೂದಲಿನ ಗುಡ್ಡೆಯನ್ನು ಹೊರತೆಗೆದಿದ್ದಾರೆ.

ಸದ್ಯ ಮಗು ಅಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಅಪರೂಪದ ಪ್ರಕರಣ ಕಂಡುಬರುವುದು ವೈದ್ಯಕೀಯವಾಗಿ ಅತ್ಯಂತ ವಿರಳ ಎಂದು ತಜ್ಞರು ಹೇಳಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img