ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಕರ್ನಾಟಕ ಪ್ರೆಸ್ ಕ್ಲಬ್‌ನ ಕೂಡ್ಲಿಗಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ವಿಜಯವಾಣಿ ವರದಿಗಾರ ವೀರೇಶ್ ಅಂಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯ ಉಪಾಧ್ಯಕ್ಷ ಕೆ. ಕೊಟ್ರೇಶ್, ರಾಜ್ಯಾಧ್ಯಕ್ಷ ಬಿಚ್ಚುಗತ್ತಿ ಖಾಜ್ ಹುಸೇನ್ ಹಾಗೂ ವಿಜಯನಗರ ಜಿಲ್ಲಾಧ್ಯಕ್ಷ ಕಾಕುಬಾಳು ಪ್ರಕಾಶ್ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ. ಕೊಟ್ರೇಶ್, ಪತ್ರಕರ್ತರ ಕಲ್ಯಾಣಕ್ಕಾಗಿ ಆರೋಗ್ಯ ವಿಮೆ ಯೋಜನೆ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪ್ರೋತ್ಸಾಹ ಧನ ಹಾಗೂ 55 ವರ್ಷ ಮೇಲ್ಪಟ್ಟ ಪತ್ರಕರ್ತರಿಗೆ ವಾರ್ಷಿಕ ₹5000 ಪ್ರೋತ್ಸಾಹ ಧನ ನೀಡುವ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಎಂ. ಮಂಜು ಮಯೂರ ಅವರನ್ನು ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯ ಕಾರ್ಯದರ್ಶಿಯಾಗಿ ಹಾಗೂ ಎಚ್. ವೀರಣ್ಣ ಅವರನ್ನು ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರ ವಿತರಿಸಲಾಯಿತು.
ಇತರೆ ಪದಾಧಿಕಾರಿಗಳ ಆಯ್ಕೆ
ಗೌರವ ಅಧ್ಯಕ್ಷರಾಗಿ ಕಾವಲಿ ಶಿವಪ್ಪ ನಾಯಕ (ಉದಯದಿಗಂತ), ಉಪಾಧ್ಯಕ್ಷರಾಗಿ ಎಲೆ ನಾಗರಾಜ್ (ಹೊಂಬೆಳಕು), ಖಜಾಂಚಿಯಾಗಿ ಎ.ಎಂ. ಸೋಮಶೇಖರಯ್ಯ (ಪ್ರಜಾವಾಣಿ), ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ವೀರೇಶ್ (ಸಂಯುಕ್ತ ಕರ್ನಾಟಕ), ಸಹ ಕಾರ್ಯದರ್ಶಿಯಾಗಿ ಬಿ. ನಾಗರಾಜ್ (ಹೊಸಪೇಟೆ ಟೈಮ್ಸ್), ಸಂಘಟನಾ ಕಾರ್ಯದರ್ಶಿಯಾಗಿ ಇಬ್ರಾಹಿಂ (ಬಳ್ಳಾರಿ ಬೆಳಗಾಯಿತು) ಅವರನ್ನು ಆಯ್ಕೆ ಮಾಡಲಾಯಿತು.
ಇದಲ್ಲದೆ ಬಗುಡಿ ಬಾಲಪ್ಪ (ಈ ನಮ್ಮ ಕನ್ನಡ ನಾಡು), ಶಿವು ಪ್ರಸಾದ್ (ಸಂಯುಕ್ತ ಕರ್ನಾಟಕ), ಎಸ್.ಎಂ. ರಿಯಾಜ್ ಬಾಷಾ (ವಿಜಯನಗರ ಟೈಮ್ಸ್) ಸೇರಿದಂತೆ ಹಲವರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೊಟ್ಟೂರು ತಾಲೂಕಿನ ಪ್ರೆಸ್ ಕ್ಲಬ್ ಅಧ್ಯಕ್ಷ ಡಿ. ಸಿದ್ದಪ್ಪ, ಉಪಾಧ್ಯಕ್ಷ ತೆಗ್ಗಿನಕೇರಿ ಕೊಟ್ರೇಶ್, ಹೆಚ್. ದಾದಾಪೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಪತ್ರಕರ್ತರ ಹಿತಾಸಕ್ತಿ ಮತ್ತು ಭದ್ರತೆಗಾಗಿ ಸಂಘಟಿತ ಹೋರಾಟ ಮುಂದುವರೆಯಲಿದೆ.”
ಕೆ. ಕೊಟ್ರೇಶ್ರಾ
ಜ್ಯ ಉಪಾಧ್ಯಕ್ಷ, ಕರ್ನಾಟಕ ಪ್ರೆಸ್ ಕ್ಲಬ್



