HomeBengaluru NewsLipstick Side Effects: ಲಿಪ್‌ಸ್ಟಿಕ್ ಖರೀದಿಸುವ ಮುನ್ನ ಎಚ್ಚರ! ಕೆಲ ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ, ಲೋಹ...

Lipstick Side Effects: ಲಿಪ್‌ಸ್ಟಿಕ್ ಖರೀದಿಸುವ ಮುನ್ನ ಎಚ್ಚರ! ಕೆಲ ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ, ಲೋಹ ಪತ್ತೆ

For Dai;y Updates Join Our whatsapp Group

ಬೆಂಗಳೂರು: ಲಿಪ್‌ಸ್ಟಿಕ್ ಬಳಸುವವರಿಗೆ ಆಹಾರ ಸುರಕ್ಷತಾ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಮಾರಾಟವಾಗುವ ಕೆಲವು ಲಿಪ್‌ಸ್ಟಿಕ್‌ಗಳ ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಹಾಗೂ ಲೋಹದ ಅಂಶಗಳು ಪತ್ತೆಯಾಗಿವೆ ಎಂದು ಕರ್ನಾಟಕ ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಾರಾಟವಾಗುತ್ತಿದ್ದ ಲಿಪ್‌ಸ್ಟಿಕ್‌ಗಳ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಬ್ರಾಂಡೆಡ್ ಉತ್ಪನ್ನಗಳ ಜೊತೆಗೆ ರಸ್ತೆ ಬದಿ ಹಾಗೂ ಇತರೆಡೆ ಮಾರಾಟವಾಗುತ್ತಿದ್ದ ಲಿಪ್‌ಸ್ಟಿಕ್‌ಗಳ ಮಾದರಿಗಳನ್ನೂ ಪರಿಶೀಲಿಸಲಾಗಿದೆ.

ಪರಿಶೀಲನೆಗೆ ಒಳಪಡಿಸಿದ ಮಾದರಿಗಳ ಪೈಕಿ 23 ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ ಎಂದು ಇಲಾಖೆ ತಿಳಿಸಿದೆ. ಕೆಲವು ಮಾದರಿಗಳಲ್ಲಿ ಕಾರ್ಸಿನೋಜೆನಿಕ್ ಎಂದು ಗುರುತಿಸಲಾದ ಅಂಶಗಳ ಜೊತೆಗೆ ಲೋಹದ ಅಂಶಗಳೂ ಕಂಡುಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೀರ್ಘಕಾಲ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ?

ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುವ ಸೌಂದರ್ಯ ಉತ್ಪನ್ನಗಳನ್ನು ದೀರ್ಘಕಾಲ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ವಿಶೇಷವಾಗಿ ಕಾರ್ಸಿನೋಜೆನಿಕ್ ಅಂಶಗಳು ಪತ್ತೆಯಾಗಿರುವ ಉತ್ಪನ್ನಗಳ ಬಳಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಈಗಾಗಲೇ ಸಂಗ್ರಹಿಸಿರುವ ಲಿಪ್‌ಸ್ಟಿಕ್ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಿಪ್‌ಸ್ಟಿಕ್ ಖರೀದಿಸುವಾಗ ಏನು ಗಮನಿಸಬೇಕು?

ಆಹಾರ ಸುರಕ್ಷತಾ ಇಲಾಖೆಯ ಆಯುಕ್ತ ಶ್ರೀನಿವಾಸ್ ಅವರು ಲಿಪ್‌ಸ್ಟಿಕ್ ಖರೀದಿಸುವಾಗ ಗ್ರಾಹಕರು ಉತ್ಪನ್ನದ ಗುಣಮಟ್ಟ ಹಾಗೂ ಪ್ಯಾಕೇಜಿಂಗ್ ಮೇಲಿನ ಮಾಹಿತಿಯನ್ನು ಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ.

ಉತ್ಪನ್ನದ ಲೇಬಲ್, ತಯಾರಿಕಾ ದಿನಾಂಕ, ಮುಕ್ತಾಯ ದಿನಾಂಕ ಹಾಗೂ ತಯಾರಕರ ವಿವರಗಳನ್ನು ಪರಿಶೀಲಿಸಿ ಖರೀದಿಸಬೇಕು. ಅನುಮಾನಾಸ್ಪದ ಅಥವಾ ಸರಿಯಾದ ಲೇಬಲ್ ಇಲ್ಲದ ಉತ್ಪನ್ನಗಳ ಬಳಕೆಯನ್ನು ತಪ್ಪಿಸುವುದು ಉತ್ತಮ ಎಂದು ಇಲಾಖೆ ಸೂಚಿಸಿದೆ.

ಪರೀಕ್ಷಾ ವರದಿಗಳ ಆಧಾರದ ಮೇಲೆ ಯಾವ ಉತ್ಪನ್ನಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದೆ ಎಂಬುದರ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img