HomeGadag Newsಇಂದಿನಿಂದ 60 ದಿನಗಳ ಕಾಲ ರೇಸ್ ಕೋರ್ಸ್ ರಸ್ತೆ ಬಂದ್! ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

ಇಂದಿನಿಂದ 60 ದಿನಗಳ ಕಾಲ ರೇಸ್ ಕೋರ್ಸ್ ರಸ್ತೆ ಬಂದ್! ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

For Dai;y Updates Join Our whatsapp Group

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ರೇಸ್ ಕೋರ್ಸ್ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗಿದ್ದು, ವಾಹನ ಸವಾರರಿಗೆ ಮಹತ್ವದ ಸಂಚಾರ ಬದಲಾವಣೆ ಮಾಡಲಾಗಿದೆ. ಮೌರ್ಯ ಜಂಕ್ಷನ್‌ನಿಂದ ಹರೇ ಕೃಷ್ಣ ರಸ್ತೆ ಜಂಕ್ಷನ್‌ವರೆಗೆ ನಡೆಯಲಿರುವ ಕಾಮಗಾರಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 5ರಿಂದ ಮುಂದಿನ 60 ದಿನಗಳ ಕಾಲ ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಯಾವ ಮಾರ್ಗದಲ್ಲಿ ಸಂಚಾರ ಬಂದ್?

ಶಿವಾನಂದ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಕಡೆಗೆ ಹಾಗೂ ಟ್ರೈಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಕಡೆಗೆ ತೆರಳುವ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಸಂಕಿ ರಸ್ತೆಯಿಂದ ಕೆ.ಆರ್. ಮಾರ್ಕೆಟ್ ಕಡೆಗೆ ತೆರಳುವ ಬಿಎಂಟಿಸಿ, ಖಾಸಗಿ ಬಸ್‌ಗಳು ಹಾಗೂ ಭಾರಿ ವಾಹನಗಳು ವಿಂಡ್ಸರ್ ಮ್ಯಾನರ್ ಮೂಲಕ ಎಲ್‌ಆರ್‌ಡಿಇ ಜಂಕ್ಷನ್ ತಲುಪಿ, ಅಲ್ಲಿಂದ ಬಲಕ್ಕೆ ತಿರುವು ಪಡೆದು ಬಸವೇಶ್ವರ ಜಂಕ್ಷನ್ ಮೂಲಕ ಸಂಚರಿಸಬೇಕಾಗಿದೆ.

ಮಜೆಸ್ಟಿಕ್ ಕಡೆಗೆ ತೆರಳುವವರು ಈ ಮಾರ್ಗ ಬಳಸಿ

ಮಜೆಸ್ಟಿಕ್ ಕಡೆಗೆ ತೆರಳುವ ವಾಹನ ಸವಾರರು ಸಂಕಿರಸ್ತೆಯಿಂದ ಕುಮಾರ ಕೃಪಾ ರಸ್ತೆ ಮೂಲಕ ಶಿವಾನಂದ ವೃತ್ತ ತಲುಪಬೇಕು. ಬಳಿಕ ಬಲಕ್ಕೆ ತಿರುಗಿ ಎಸ್‌ಸಿ ರಸ್ತೆಯ ಮೂಲಕ ಮಜೆಸ್ಟಿಕ್ ಕಡೆಗೆ ಸಾಗಬಹುದು.

ಹಳೆಯ ಜೆಡಿಎಸ್ ಜಂಕ್ಷನ್‌ನಿಂದ ಬರುವವರಿಗೆ ಪರ್ಯಾಯ ಮಾರ್ಗ

ಹಳೆಯ ಜೆಡಿಎಸ್ ಜಂಕ್ಷನ್‌ನಿಂದ ಟ್ರೈಲೈಟ್ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ರೇಸ್‌ವ್ಯೂ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ, ಕುಮಾರ ಕೃಪಾ ರಸ್ತೆ ಮೂಲಕ ಶಿವಾನಂದ ಜಂಕ್ಷನ್ ತಲುಪಬಹುದು.

ಇನ್ನು ಟ್ರೈಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಕಡೆಗೆ ತೆರಳುವ ವಾಹನ ಸವಾರರು ಶಿವಾನಂದ ಫ್ಲೈಓವರ್ ಬಳಸಿಕೊಂಡು ನೆಹರೂ ವೃತ್ತದ ಮೂಲಕ ಎಸ್‌ಸಿ ರಸ್ತೆ ಸೇರಿ ಮಜೆಸ್ಟಿಕ್ ಕಡೆಗೆ ತೆರಳಬಹುದಾಗಿದೆ. ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ಸಂಚಾರ ನಿರ್ಬಂಧಗಳು ಜಾರಿಯಲ್ಲಿರಲಿವೆ. ಹೀಗಾಗಿ ವಾಹನ ಸವಾರರು ಮುಂಚಿತವಾಗಿ ತಮ್ಮ ಪ್ರಯಾಣದ ಮಾರ್ಗವನ್ನು ಯೋಜಿಸಿಕೊಂಡು, ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img