HomeCrime Newsಗಂಡ-ಹೆಂಡತಿ ನಡುವೆ ಜಗಳ: ಮಗನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ

ಗಂಡ-ಹೆಂಡತಿ ನಡುವೆ ಜಗಳ: ಮಗನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ

For Dai;y Updates Join Our whatsapp Group

Spread the love

ಮಂಡ್ಯ: ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿ ಮಗನ ಜೊತೆ ಸೇರಿ ಗಂಡನನ್ನೇ ಪತ್ನಿ ಹತ್ಯೆಗೈದಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಚಾಪುರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ಚಾಪುರದೊಡ್ಡಿ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿ ಉಮೇಶ್ (50) ಎನ್ನಲಾಗಿದೆ.

ಪತ್ನಿ ಸವಿತಾ, ಮಗ ಶಶಾಂಕ್ ರಿಂದ ಕೃತ್ಯವೆಸಗಲಾಗಿದೆ. ಮೂರು ತಿಂಗಳ ಇದೆ ಗಂಡನನ್ನ ತೊರೆದು ಬೆಂಗಳೂರಿನಲ್ಲಿ ಮಗನ ಜೊತೆ ವಾಸವಾಗಿದ್ದ ಸವಿತಾ ರಾತ್ರಿ ಪಿತೃಪಕ್ಷ ಹಬ್ಬ ಮಾಡಲು ಊರಿಗೆ ಬಂದಿದ್ದ ಸವಿತಾ. ಚಾಪುರದೊಡ್ಡಿ ಗ್ರಾಮಕ್ಕೆ ಬಂದಿದ್ದಳು. ಈ ವೇಳೆ ಪತ್ನಿಯನ್ನ ಮನೆಯೊಳಗೆ ಸೇರಿಸದರು. ಈ ವೇಳೆ ಮತ್ತೆ ಪತ್ನಿ ಸವಿತಾ ಹಾಗೂ ಮಗ ಶಶಾಂಕ್ ಅವರುಗಳೊಂದಿಗೆ ಜಗಳ ನಡೆದು ದೊಣ್ಣೆ ಹಾಗೂ ಮಚ್ಚುಗಳಿಂದ ಇಬ್ಬರು ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ.

ತೀವ್ರ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಉಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಉಮೇಶ್ ಸಾವನ್ನಪ್ಪಿರುವುದು ತಿಳಿಯುತ್ತಿದ್ದಂತೆ ಸವಿತಾ ಹಾಗೂ ಶಶಾಂಕ್ ಸ್ಥಳದಿಂದ ಪರಾರಿಯಾಗಿದ್ದರು. ಸ್ಥಳಕ್ಕೆ ಮದ್ದೂರು ಗ್ರಾಮಾಂತರ ಇನ್ಸ್ಪೆಕ್ಟರ್ ವೆಂಕಟೇಗೌಡ, ಬೆಸಗರಹಳ್ಳಿ ಪೋಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಮಲ್ಲಪ್ಪ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!