HomeGadag Newsಎ.ಎಂ. ಢಾಲಾಯತರಿಗೆ ಶಿಕ್ಷಣ ಭೀಷ್ಮ' ಪ್ರಶಸ್ತಿ

ಎ.ಎಂ. ಢಾಲಾಯತರಿಗೆ ಶಿಕ್ಷಣ ಭೀಷ್ಮ’ ಪ್ರಶಸ್ತಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ `ರೂಪ್ಸಾ ಸಂಭ್ರಮ-2024′ ಕಾರ್ಯಕ್ರಮವು ಶ್ರೀ ಡಾ. ಮಹೇಶ್ವರ ಮಹಾಸ್ವಾಮಿಗಳು, ವಿಜಯನಗರ ಇವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಆಗಮಿಸಿದ್ದರು. ವಿಶೇಷ ಅತಿಥಿಗಳಾಗಿ ಎಸ್.ಎಲ್. ಬೋಜೆಗೌಡರು, ಅಧ್ಯಕ್ಷತೆಯನ್ನು ಡಾ. ಹಾಲನೂರ ಲೇಪಾಕ್ಷ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಪ್ರಧಾನ ಕಾರ್ಯದರ್ಶಿ ಶಶಿಧರ ದಿಂಡೂರ, ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧಕರಾದ ಡಾ. ಎಸ್.ಟಿ. ಗಿರೀಶ, ರೂಪ್ಸಾ ಕಾರ್ಯಕಾರಿ ಮಂಡಳಿಯ ಎಲ್ಲ ಪದಾಧಿಕಾರಿಗಳು, ಸುಪ್ರೀಂಕೋರ್ಟ್ನ ವಕೀಲರಾದ ಸಂಕೇತ ಏಣಗಿ, ಮೂಡಬಿದರಿಯ ಮೋಹನ ಆಳ್ವ ಪಾಲ್ಗೊಂಡಿದ್ದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಹಾಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ `ಶಿಕ್ಷಣ ಭೀಷ್ಮ ಪ್ರಶಸ್ತಿ’ ನೀಡಿ ಸನ್ಮಾನಿಸಿದರು. ಗದಗ ಜಿಲ್ಲೆಯ ರೂಪ್ಸಾ ಕಾರ್ಯದರ್ಶಿ ಎ.ಎಂ. ಢಾಲಾಯತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img