HomeGadag Newsನಾಳಿನ ಸಮಾಜಕ್ಕಾಗಿ ಇಂದೇ ವ್ಯಸನ ವಿರೋಧಿ ಸಂಕಲ್ಪ

ನಾಳಿನ ಸಮಾಜಕ್ಕಾಗಿ ಇಂದೇ ವ್ಯಸನ ವಿರೋಧಿ ಸಂಕಲ್ಪ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ನಗರದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ (ನಂ.2)ಯಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷೆ ಮಂಜುಳಾ ಅಕ್ಕಿ, ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಸಮಾಜದಲ್ಲಿ ಮಾದಕ ವ್ಯಸನ ತಡೆಗೆ ಸಹಕಾರಿಯಾಗಲಿವೆ ಎಂದು ಹೇಳಿದರು.

ಪ್ರಬಂಧ ಸ್ಪರ್ಧೆಯಲ್ಲಿ ಐದನೇ ತರಗತಿಯ ಜಯಶ್ರೀ ಕೊತಬಾಳ, ವಿದ್ಯಾಶ್ರೀ ಕನ್ನೂರ ಹಾಗೂ ಮುಸ್ಕಾನ್ ಇಲಿ, ಆರನೇ ತರಗತಿಯ ಶಿಫಾ ಎಂಡಿಗೇರಿ, ಅರ್ಪಿತಾ ಮರಾಠಿ ಹಾಗೂ ಸಫಾ ಪಾಟೀಲ್, ಏಳನೇ ತರಗತಿಯ ಪ್ರಿಯಾಂಕ ಹಡಪದ, ಜಾಕಿರಾ ನದಾಫ್ ಹಾಗೂ ಶ್ರೀದೇವಿ ಅಯಾರ್ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಕ್ಲಬ್ ವತಿಯಿಂದ ವಿಜೇತರಿಗೆ ಬಹುಮಾನ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಪೆನ್ನು ಮತ್ತು ಸಿಹಿ ವಿತರಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಎಂ. ರೇಷ್ಮಿ ಮಾತನಾಡಿ, ಇನ್ನರ್ ವೀಲ್ ಕ್ಲಬ್‌ನ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿದರು. ಶಾಲೆಯ ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಈ ಸಂದರ್ಭದಲ್ಲಿ ಕ್ಲಬ್‌ನ ಉಪಾಧ್ಯಕ್ಷೆ ಶಿವಲೀಲಾ ಅಕ್ಕಿ, ಕಾರ್ಯದರ್ಶಿ ಪೂಜಾ ಭೂಮಾ, ಸಂಪಾದಕಿ ಮೀನಾಕ್ಷಿ ಕೊರವನವರ, ಸಿಪಿಸಿಸಿ ಜಯಶ್ರೀ ಉಗಲಾಟದ, ಕೋ-ಸಿಪಿಸಿಸಿ ಶಾರದಾ ಸಜ್ಜನರ, ಮಾಜಿ ಅಧ್ಯಕ್ಷೆ ನೀಲಾಂಬಿಕಾ ಉಗಲಾಟದ, ಹಿರಿಯ ಸದಸ್ಯೆ ಸುಶೀಲಾ ಕೋಟಿ, ಶಿಕ್ಷಕರಾದ ಇಂದಿರಾಬಾಯಿ ಎಸ್.ವಿ., ಪಿ.ಎಫ್. ನಾಗನೂರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಖಜಾಂಚಿ ವೀಣಾ ಕಾವೇರಿ ನಿರೂಪಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img