ವಿಜಯಸಾಕ್ಷಿ ಸುದ್ದಿ, ನರೇಗಲ್ : ಪಟ್ಟಣದ ಆರ್ಯವೈಶ್ಯ ಸಮಾಜದವರು ನೂತನವಾಗಿ ಶ್ರೀ ನಗರೇಶ್ವರ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಈ ದೇವಸ್ಥಾನದಲ್ಲಿ ಶ್ರೀ ನಗರೇಶ್ವರ, ಶ್ರೀ ಕನ್ಯಕಾ ಪರಮೇಶ್ವರಿ, ಶ್ರೀ ವೆಂಕಟೇಶ್ವರ, ಶ್ರೀ ಆಂಜನೇಯ ಶ್ರೀ ವಿಘ್ನೇಶ್ವರ ಮತ್ತು ಶ್ರೀ ನಂದಿ ವಿಗ್ರಹಗಳ ಪ್ರತಿಷ್ಠಾಪನೆ ಜುಲೈ 12ರಂದು ಜರುಗಲಿದೆ. ಅದರ ನಿಮಿತ್ತ ಗುರುವಾರ ಆ ಎಲ್ಲ ಮೂರ್ತಿಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದು ಭಕ್ತರ ಮನವನ್ನು ಮುದಗೊಳಿಸಿತು.
ಶ್ರೀ ನಗರೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಹಳೆ ಬಸ್ ನಿಲ್ದಾಣದ ಮೂಲಕ ಸಾಗಿ ಮುಖ್ಯ ರಸ್ತೆಯಲ್ಲಿ ಬಂದು ಹೊಸ ಬಸ್ ನಿಲ್ದಾಣ, ಶ್ರೀ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಗಜಾನನ ದೇವಸ್ಥಾನದ ಮೂಲಕ ಹಾಯ್ದು ಮತ್ತೆ ಶ್ರೀ ನಗರೇಶ್ವರ ದೇವಸ್ಥಾನವನ್ನು ತಲುಪಿತು.
ಸುಮಂಗಲೆಯರು ಒಂದೇ ರೀತಿಯ ಪೋಷಾಕನ್ನು ಧರಿಸಿಕೊಂಡು, ತಲೆಗೆ ಪೇಟಾ ಸುತ್ತಿಕೊಂಡು ಕೋಲಾಟವಾಡುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡ ದೃಶ್ಯ ನಯನಮನೋಹರವಾಗಿತ್ತು. ದೇವಸ್ಥಾನದಲ್ಲಿ ವಿಶ್ವನಾಥಭಟ್ಟ ಗ್ರಾಮಪುರೋಹಿತರು ಸಮಾಜದ ಅಧ್ಯಕ್ಷ ರಾಮಚಂದ್ರಪ್ಪ ನವಲಿಯವರ ನೇತೃತ್ವದಲ್ಲಿ ಕುಂಭಗಳಿಗೆ ಪೂಜೆ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಸಮಾಜದ ಹಿರಿಯರಾದ ಚಂದ್ರಹಾಸ ಇಲ್ಲೂರ, ಮಹಾದೇವಪ್ಪ ಇಲ್ಲೂರ, ಮನೋಹರ ಗುಡಿಸಾಗರ, ಸುರೇಶ ಗುಡಿಸಾಗರ, ರಾಮಚಂದ್ರ ಬೆಟದೂರ, ನಾಗೇಶ ಗುಡಿಸಾಗರ, ಚಂದ್ರಹಾಸ ಇಂಗಳಹಳ್ಳಿ, ರಾಜೇಂದ್ರ ದೇವರಂಗಡಿ, ವೆಂಕಟೇಶ ಕಣವಿಹಳ್ಳಿ, ಮುತ್ತಣ್ಣ ದೇವರಂಗಡಿ, ವಿಜಯ ಕೃಷ್ಣ ನವಲಿ, ಅಶೋಕ ನವಲಿ, ಮಹೇಶ ನವಲಿ, ಮಂಜುನಾಥ ನವಲಿ, ಹನುಮಂತಪ್ಪ ಬಿಜಾಪೂರ, ಶ್ರೀನಿವಾಸ ಜಂತ್ಲಿ, ಬಸವರಾಜ ಹೇಮಾದ್ರಿ, ಸುರೇಶ ನವಲಿ, ವೀರಣ್ಣ ಇಲ್ಲೂರ, ವೀರಭದ್ರ ಇಲ್ಲೂರ ಅಮಿತ ದೇವರಂಗಡಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.



