Homecultureಹಬ್ಬಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ : ರುಕ್ಮಿಣಿಬಾಯಿ ದ್ವಾರಪಾಲಕ

ಹಬ್ಬಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ : ರುಕ್ಮಿಣಿಬಾಯಿ ದ್ವಾರಪಾಲಕ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಸನಾತನ ಹಿಂದೂ ಧರ್ಮದಲ್ಲಿ ಪ್ರಕೃತಿ ಪೂಜೆ ಮಾಡುವ ವಾಡಿಕೆ ಇದೆ. ಶಮೀ ವೃಕ್ಷವನ್ನು ನವರಾತ್ರಿಯಲ್ಲಿ ಪೂಜಿಸುತ್ತೇವೆ. ಬನ್ನಿ ಗಿಡದಲ್ಲಿ ಶ್ರೀ ದುರ್ಗಾದೇವಿ ವಾಸವಾಗಿದ್ದಾಳೆ ಎಂಬ ನಂಬಿಕೆ ನಮ್ಮದು. ದುಷ್ಟ ಶಕ್ತಿಗಳನ್ನು ಸಂಹಾರ ಮಾಡುವುದೇ ನವರಾತ್ರಿ ಪೂಜೆಯ ಸಂಕೇತ. ರಾಕ್ಷಸರ ಸಂಹಾರ ಮಾಡಿ ಸಾಧಿಸುವ ವಿಜಯವೇ ವಿಜಯದಶಮಿ. ಹಬ್ಬಗಳು ತಮ್ಮದೇ ಆದ ಮಹತ್ವವನ್ನು ಪಡೆದುಕೊಂಡಿರುತ್ತವೆ.
ಅವುಗಳನ್ನು ಕೇವಲ ಪೌರಾಣಿಕ ಅಥವಾ ಸಾಂಪ್ರದಾಯಿಕ ಹಿನ್ನೆಲೆಯಿಂದ ನೋಡದೆ ವಾಸ್ತವಿಕ ಪ್ರಜ್ಞೆ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ಅವುಗಳ ಮಹತ್ವದ ಅರಿವು ನಮಗಾಗುತ್ತದೆ ಎಂದು ಆಧ್ಯಾತ್ಮ ಚಿಂತಕಿ ರುಕ್ಮಿಣಿಬಾಯಿ ದ್ವಾರಪಾಲಕ ಅಭಿಪ್ರಾಯಪಟ್ಟರು.
ಇಲ್ಲಿನ ಅಕ್ಕನ ಬಳಗದಲ್ಲಿ ನವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲತಾ ಮುತ್ತಿನಪೆಂಡಿಮಠ ಹಾಗೂ ಮಂಗಲಾ ನಾಲವಾತ್ವಡಮಠ ಬಳಗದ ಸದಸ್ಯರಿಗಾಗಿ ಆಟಗಳನ್ನು ಆಡಿಸಿದರು. ಜಯಶ್ರೀ ಬಾಳಿಹಳ್ಳಿಮಠ, ಬೀನಾ ಮಾನ್ವಿ, ಆರತಿ ಜೀರಂಕಳ ಬಹುಮಾನ ಪಡೆದರು. ಹಿರಿಯ ಟ್ರಸ್ಟಿಗಳಾದ ಶಿವಲೀಲಾ ಕುರಡಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖಜಾಂಚಿಗಳಾದ ಜಯಲಕ್ಷ್ಮೀ ಬಳ್ಳಾರಿ ಅವರು ಕಾರ್ಯಕ್ರಮ ಸಂಯೋಜಿಸಿದರು. ಉಮಾ ರಾಮನಕೊಪ್ಪ ಪರಿಚಯಿಸಿದರು.
ನಾಗರತ್ನ ಹುಬಳಿಮಠ, ಮಂಜುಳಾ ಹುಬಳ್ಳಿಮಠ, ಗಿರಿಜಾ ನಾಲವಾತ್ವಾಡಮಠ, ಮಂಗಲಾ ಗೊಡಚಿ, ಸುಜಾತಾ ಮಾನ್ವಿ, ರೇಖಾ ಉಮೇಶ ಶಗ್ಲಿಮಠ, ಶೈಲಾ ಭೂಸನೂರಮಠ, ನಿರ್ಮಲಾ ಹುಬಳಿಮಠ, ಕಲಾವತಿ ಪಟ್ಟಣಶೆಟ್ಟಿ, ಪುಷ್ಪಾ ಬಳ್ಳಾರಿ, ನೀತಾ ದುಂದೂರ, ಪುಷ್ಪಾ ಹಿರೇಮಠ, ಉಮಾ ಲಕ್ಷ್ಮೇಶ್ವರಮಠ, ಬೀನಾ ಮಾನ್ವಿ, ಪಾರ್ವತಿ ಮಾಳೆಕೊಪ್ಪಮಠ, ದಾನೇಶ್ವರಿ, ಸುಗಲಾ, ಸುವರ್ಣ ಹೊಸಂಗಡಿ ಮುಂತಾದವರು ಪಾಲ್ಗೊಂಡಿದ್ದರು.
ಅಕ್ಕನ ಬಳಗಕ್ಕೆ ಹೊಸದಾಗಿ ಆರತಿ ಜೀರಂಕಳೆ, ಲಕ್ಷ್ಮೀ ಕುರುಗೋಡ, ವಾಣಿ ಮುನವಳ್ಳಿ ಸದಸ್ಯತ್ವವನ್ನು ಪಡೆದರು. ಬಳಗದ ಅಧ್ಯಕ್ಷರಾದ ಲಲಿತಾ ವಿ.ಬಾಳಿಹಳ್ಳಿಮಠ ಸರ್ವರನ್ನೂ ಸ್ವಾಗತಿಸಿದರು. ಪ್ರಸಾದದ ಭಕ್ತಿ ಸೇವೆಯನ್ನು ಶಾಂತಾ ವಿ. ಸಂಕನೂರ ವಹಿಸಿಕೊಂಡಿದ್ದರು. ದೀಪಾ ಪಟ್ಟಣಶೆಟ್ಟಿ ನಿರೂಪಿಸಿದರು. ಲಲಿತಾ ಇಂಗಳಳ್ಳಿ ಪ್ರಾರ್ಥಿಸಿದರು. ರೇಣುಕಾ ಅಮಾತ್ಯ ವಂದಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img