ಬೆಂಗಳೂರು: ಮಳೆ ಅಥವಾ ಗಾಳಿ ಇಲ್ಲದಿದ್ದರೂ ಬೃಹತ್ ಮರದ ಕೊಂಬೆಯೊಂದು ಮುರಿದು ಬಿದ್ದ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಎರಡು ಕಾರು ಮತ್ತು ಒಂದು ಬೈಕ್ ಜಖಂ ಆಗಿದೆ.
ಬಿ.ಎಂ.ಎಲ್. ಲೇಔಟ್ನಲ್ಲಿ ನಿನ್ನೆ ಮಧ್ಯಾಹ್ನ ಸುಮಾರು 3:30ಕ್ಕೆ ಈ ಘಟನೆ ನಡೆದಿದ್ದು, ಒಂದು ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಇನ್ನೊಂದು ಕಾರು ಮತ್ತು ಬೈಕ್ಗೆ ಭಾಗಶಃ ಹಾನಿಯಾಗಿದೆ.
ಘಟನೆಯ ಸಮಯದಲ್ಲಿ ಅಲ್ಲಿ ಯಾರೂ ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಹತ್ತಿರದಲ್ಲೇ ಶಾಲೆಗಳು ಇರುವುದರಿಂದ ಮಕ್ಕಳು ಇದ್ದಿದ್ದರೆ ಅಪಾಯ ಹೆಚ್ಚಾಗಿರುತ್ತಿತ್ತು.
ಸ್ಥಳೀಯರು ಹೇಳುವಂತೆ, ಅಪಾಯಕರ ಮರದ ಕೊಂಬೆಗಳನ್ನು ತೆರವುಗೊಳಿಸಲು ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಬಿಎ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.



