HomeEntertainment‘ತಂತ್ರ’ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ

‘ತಂತ್ರ’ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಸಿಲ್ವರ್‌ಸ್ಕೈ ಪ್ರೊಡಕ್ಷನ್ ಸಿನಿಮಾ ಸಂಸ್ಥೆ ನಿರ್ಮಿಸಿರುವ ಕುತೂಹಲಭರಿತ ‘ತಂತ್ರ’ ಕನ್ನಡ ಚನಲಚಿತ್ರಕ್ಕೆ ತೆಲಂಗಾಣ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2025ರಲ್ಲಿ ಎರಡು ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಲ್ಲದೆ, ಜಿಆಯ್‌ಎಫ್‌ಸಿ ಚಲನಚಿತ್ರೋತ್ಸವಕ್ಕೂ ಚಿತ್ರ ಆಯ್ಕೆ ಆಗಿದೆ.

ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘವು ತೆಲಂಗಾಣದಲ್ಲಿ ಆಯೋಜಿಸಿದ್ದ ಚಲನಚಿತ್ರೋತ್ಸವವು ಐಎಫ್‌ಎಮ್‌ಎ ರಾಷ್ಟ್ರೀಯ ಕಾರ್ಯದರ್ಶಿ ಪುಲಗಂ ರಾಮಚಂದ್ರ ರೆಡ್ಡಿ ಮತ್ತು ರಾಷ್ಟ್ರೀಯ ಅಧ್ಯಕ್ಷ ದಿಲೀಪಕುಮಾರ್ ಎಚ್.ಆರ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಬೆಸ್ಟ್ ಹಾರರ್ ಫಿಲ್ಮ್, ಬೆಸ್ಟ್ ರಿ-ರೆಕಾರ್ಡಿಂಗ್ ಸೌಂಡ್ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದೆ.

ಬೆಂಗಳೂರು, ಬೆಳಗಾವಿ, ಸಂಕೇಶ್ವರ, ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಚಿತ್ರೀಕರಣ ನಡೆಸಲಾದ ಈ ಚಿತ್ರದಲ್ಲಿ ನಾಯಕರಾಗಿ ಶಶಿಕಾಂತ್, ನಾಯಕಿಯರಾಗಿ ಸೌಜನ್ಯ ಮತ್ತು ಮೇಘಾ, ಎರಡನೇ ನಾಯಕನಾಗಿ ನಟ ವಿಕ್ರಾಂತ್, ಪ್ರಮುಖ ಪಾತ್ರದಲ್ಲಿ ಸಾಮ್ರಾಟ್ ನಟಿಸಿದ್ದಾರೆ. ಪಾರು ದಾವಣಗೆರೆ ವಿಶೇಷವಾದ ಗೀತೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಹಾಸ್ಯ ಪಾತ್ರದಲ್ಲಿ ಜೈ ಅಮೋಘ ದಾಸ್ ಅಲ್ಲದೆ ಸಂತೋಷ್ ಕೇರಿ ಎಂಬ ಜನಪ್ರಿಯ ಯೂಟ್ಯೂಬರ್ ಸಹ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಛಾಯಾಗ್ರಹಣ-ರೋಹನ ದೇಸಾಯಿ, ವರ್ಧನ ಬಾಗಲಕೋಟೆ, ಕಥೆ-ವಿಶ್ವನಾಥ, ಶಶಿಕಾಂತ, ಸಾಮ್ರಾಟ, ಚಿತ್ರಕಥೆ, ಸಂಭಾಷಣೆ-ವಿಶ್ವನಾಥ, ಸಾಮ್ರಾಟ, ಸಂಗೀತ ರಮೇಶ್ ಕೃಷ್ಣ, ರೋಹನ್ ದೇಸಾಯಿ ಅವರದ್ದಿದೆ. ಮೂರು ಹಾಡುಗಳಿಗೆ ಮಾಳು ನಿಪನಾಳ, ಪ್ರಣತಿ ರಾವ್, ಆರಿಫ್ ಅಸ್ಲಾಂ, ಮೇಘನಾ ಕುಲಕರ್ಣಿ ಧ್ವನಿ ನೀಡಿದ್ದಾರೆ. ಸಂಕಲನ/ಡಿಐ ಓಂ ಸರವಣನ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ ಅವರದಿದೆ.

ಚಿತ್ರವನ್ನು ವಿಜಯಪುರದ ನಟರಾಜ ಎಂದೆ ಖ್ಯಾತರಾದ ಶಶಿಕಾಂತ್ ಪಿ.ನಾಟಿಕರ್ ನಟಿಸಿ ನಿರ್ಮಿಸಿದ್ದು, ಸಹ ನಿರ್ದೇಶನ ಸಾಮ್ರಾಟ ಶ್ರೀನಿವಾಸ, ಎಸ್.ಸಿ. ಅಶೋಕ ಕಂಬ್ಳಿ, ಸಹಾಯಕ ನಿರ್ದೇಶನ ವಿತೇಶ ಮಂಜುನಾಥ ರಾಜ, ಅಜಯ ಎ.ಜೆ, ದುರ್ಗೇಶ(ರಾಯದುರ್ಗ), ಭರಣಿ, ಸುಮಂತ ಕಾಮತ, ಮಂಜುನಾಥ ಬಂಕಾಪೂರ ಅವರದ್ದಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img