HomeCrime Newsಫೇಸ್ಬುಕ್ ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ಟೆಕ್ಕಿ!

ಫೇಸ್ಬುಕ್ ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ಟೆಕ್ಕಿ!

For Dai;y Updates Join Our whatsapp Group

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭಾರಿ ಪ್ರಮಾಣದ ಸೈಬರ್ ವಂಚನೆ ಬೆಳಕಿಗೆ ಬಂದಿದ್ದು, ಫೇಸ್‌ಬುಕ್‌ನಲ್ಲಿ ಆನ್‌ಲೈನ್ ಟ್ರೇಡಿಂಗ್ ಜಾಹೀರಾತು ನಂಬಿ ಹೂಡಿಕೆ ಮಾಡಿದ ಟೆಕ್ಕಿಯೊಬ್ಬರು ಬರೋಬ್ಬರಿ 1.9 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಈ ಕುರಿತು ಸಂತ್ರಸ್ತರು ಬೆಂಗಳೂರಿನ ಈಸ್ಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಂಚನೆ ನಡೆದಿದ್ದು ಹೇಗೆ?: ಕಳೆದ ಫೆಬ್ರವರಿ ತಿಂಗಳಲ್ಲಿ ಸಂತ್ರಸ್ತ ಟೆಕ್ಕಿ ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ ಕಣ್ಣಿಗೆ ಬಿದ್ದ ಆನ್‌ಲೈನ್ ಟ್ರೇಡಿಂಗ್ ಜಾಹೀರಾತಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದರು. ತಕ್ಷಣವೇ ಸೈಬರ್ ವಂಚಕರು ಹೂಡಿಕೆ ಸಲಹೆಗಾರರು ಹಾಗೂ ಪ್ರತಿನಿಧಿಗಳ ಸೋಗಿನಲ್ಲಿ ಸಂಪರ್ಕಿಸಿ, ‘Proxtrend’ ಎಂಬ ಹೂಡಿಕೆ ಪ್ಲಾಟ್‌ಫಾರ್ಮ್‌ಗೆ ಸೇರಲು ಪ್ರಚೋದಿಸಿದ್ದರು. ಅವರ ಮಾತನ್ನು ನಂಬಿದ ಟೆಕ್ಕಿ, ಕೊಮೊರೊಸ್ ದ್ವೀಪದ ಮ್ವಾಲಿಯಲ್ಲಿ ನೋಂದಾಯಿತ ಸಂಸ್ಥೆ ಎಂದು ನಕಲಿ ಮಾಹಿತಿ ಪ್ರದರ್ಶಿಸಲಾಗಿದ್ದ www.proxtrendltd.com ಎಂಬ ನಕಲಿ ವೆಬ್‌ಸೈಟ್‌ನಲ್ಲಿ ಖಾತೆ ತೆರೆದಿದ್ದರು.

ಫೆಬ್ರವರಿ 27 ರಿಂದ ಸೆಪ್ಟೆಂಬರ್ 9 ರ ಅವಧಿಯಲ್ಲಿ ರಾಜಾ ಎಸ್., ವಿನಯ್ ಶರ್ಮಾ, ಜಾರ್ಜ್ ಟೈಸನ್ ಸೇರಿದಂತೆ ವಿವಿಧ ನಕಲಿ ಹೆಸರುಗಳಲ್ಲಿ ಮಾತನಾಡಿದ ಅಕೌಂಟ್ ಮ್ಯಾನೇಜರ್‌ಗಳು ನಿರಂತರವಾಗಿ ಟ್ರೇಡಿಂಗ್ ಸಲಹೆ ನೀಡುತ್ತಿದ್ದರು. ಆರಂಭದಲ್ಲಿ ಆ್ಯಪ್‌ನಲ್ಲಿ ಭಾರಿ ಲಾಭ ಬಂದಂತೆ ನಕಲಿ ಬ್ಯಾಲೆನ್ಸ್ ತೋರಿಸಿ ವಿಶ್ವಾಸ ಗಳಿಸಿದ್ದ ವಂಚಕರು, ಸಂತ್ರಸ್ತರಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ 1.9 ಕೋಟಿ ರೂ. ಜಮೆ ಮಾಡಿಸಿಕೊಂಡಿದ್ದರು.

ಆರಂಭದಲ್ಲಿ ಸಣ್ಣ ಮೊತ್ತವನ್ನು ಡ್ರಾ ಮಾಡಲು ಅವಕಾಶ ನೀಡಿದ್ದ ಕಂಪನಿ, ಸೆಪ್ಟೆಂಬರ್ 9 ರಂದು ಒಟ್ಟಾರೆ ಹಣ ಹಿಂಪಡೆಯಲು ಕೋರಿದಾಗ ವಿಫಲಗೊಳಿಸಿತು. ಹಣ ಬಿಡುಗಡೆ ಮಾಡಬೇಕಾದರೆ ಪ್ರಕ್ರಿಯೆ ಸಂಕೀರ್ಣವಾಗಿದೆ ಎಂದು ಹೇಳಿ, ಹೆಚ್ಚುವರಿಯಾಗಿ 50 ಲಕ್ಷ ರೂ. ಹಾಗೂ 20 ಲಕ್ಷ ರೂ. ಕಟ್ಟುವಂತೆ ಒತ್ತಾಯಿಸಲು ಆರಂಭಿಸಿದಾಗ ತಾನು ಮೋಸ ಹೋಗಿರುವುದನ್ನು ಟೆಕ್ಕಿ ಮನಗಂಡಿದ್ದಾರೆ.

ತಕ್ಷಣವೇ ಸಂತ್ರಸ್ತರು ಸೈಬರ್ ಹೆಲ್ಪ್‌ಲೈನ್ 1930ಗೆ ದೂರು ನೀಡಿದ್ದು, ಬಳಿಕ ಈಸ್ಟ್ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರು ಬಳಸಿದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲು ಕಾರ್ಯಾಚರಣೆ ಆರಂಭಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img