HomeKarnataka Newsಚಿನ್ನ ಖರೀದಿಸುವವರಿಗೆ ಬಿಗ್ ಶಾಕ್: ಒಂದೇ ದಿನ 10 ಗ್ರಾಂಗೆ ₹880 ಏರಿಕೆ! ಬೆಳ್ಳಿ ದರ...

ಚಿನ್ನ ಖರೀದಿಸುವವರಿಗೆ ಬಿಗ್ ಶಾಕ್: ಒಂದೇ ದಿನ 10 ಗ್ರಾಂಗೆ ₹880 ಏರಿಕೆ! ಬೆಳ್ಳಿ ದರ ಎಷ್ಟಿದೆ ಗೊತ್ತಾ..?

For Dai;y Updates Join Our whatsapp Group

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಹಾಗೂ ಡಾಲರ್‌ ಮೌಲ್ಯದಲ್ಲಿನ ಇಳಿಕೆಯ ಹಿನ್ನೆಲೆಯಲ್ಲಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದ್ದು, ದೇಶದಲ್ಲಿ ಚಿನ್ನದ ಬೆಲೆ ಮತ್ತೊಮ್ಮೆ ಭರ್ಜರಿ ಏರಿಕೆ ಕಂಡಿದೆ. ಆಗಸ್ಟ್‌ 24, 2026ರ ಸೋಮವಾರದಂದು 24 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂಗೆ ₹880 ಹೆಚ್ಚಳವಾಗಿದೆ.

ಗುಡ್‌ ರಿಟರ್ನ್ಸ್‌ ವರದಿ ಪ್ರಕಾರ, 24 ಕ್ಯಾರೆಟ್‌ ಚಿನ್ನದ 1 ಗ್ರಾಂ ಬೆಲೆ ₹88 ಏರಿಕೆಯಾಗಿದ್ದು, ಇದೀಗ ₹16,397ಕ್ಕೆ ತಲುಪಿದೆ. 10 ಗ್ರಾಂ ಚಿನ್ನದ ಬೆಲೆ ₹880 ಹೆಚ್ಚಳವಾಗಿ ₹1,63,970ಕ್ಕೆ ಏರಿಕೆಯಾಗಿದೆ.

ಇನ್ನು 22 ಕ್ಯಾರೆಟ್‌ ಚಿನ್ನದ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. 1 ಗ್ರಾಂಗೆ ₹80 ಹೆಚ್ಚಳವಾಗಿದ್ದು, ₹15,030ಕ್ಕೆ ತಲುಪಿದೆ. 10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ ₹800 ಏರಿಕೆಯಾಗಿ ₹1,50,300ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಶುದ್ಧ ಚಿನ್ನದ 1 ಗ್ರಾಂ ಬೆಲೆ ₹16,397 ಇದ್ದು, ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹260ರಷ್ಟಿದೆ. ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರತಿ ಕೆಜಿ ಬೆಳ್ಳಿ ಬೆಲೆ ₹2,60,000ರಷ್ಟಿದೆ.

ಇನ್ನು ಆಗಸ್ಟ್‌ 1ರಂದು 24 ಕ್ಯಾರೆಟ್‌ ಚಿನ್ನದ 1 ಗ್ರಾಂ ಬೆಲೆ ₹14,422ರಷ್ಟಿತ್ತು. ಇದೀಗ ₹16,397ಕ್ಕೆ ಏರಿಕೆಯಾಗಿದ್ದು, 10 ಗ್ರಾಂ ಬೆಲೆ ₹1,63,970ಕ್ಕೆ ತಲುಪಿದೆ. ಚಿನ್ನದ ಬೆಲೆ ಸತತ ನಾಲ್ಕನೇ ವಾರವೂ ಗರಿಷ್ಠ ಮಟ್ಟದಲ್ಲಿ ಏರಿಕೆ ಕಾಣುತ್ತಿದ್ದು, ಹೂಡಿಕೆದಾರರ ಗಮನ ಮತ್ತೊಮ್ಮೆ ಚಿನ್ನದತ್ತ ನೆಟ್ಟಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img