ವಿಜಯಸಾಕ್ಷಿ ಸುದ್ದಿ, ಗದಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಿರಹಟ್ಟಿ ಹಾಗೂ ಮುಂಡರಗಿ ಮಂಡಲಗಳ ವತಿಯಿಂದ ಗದಗ ಜಿಲ್ಲಾ ಅಧಿಕಾರಿಗಳ ಕಚೇರಿ ಎದುರು ಬೃಹತ್ ಧರಣಿ ಹಾಗೂ ಪ್ರತಿಭಟನೆ ನಡೆಯಿತು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಬಿ.ನಾಗೇಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಹಗರಣದಲ್ಲಿ ಆರೋಪಿಯಾಗಿದ್ದು, ನೈತಿಕ ಹೊಣೆ ಹೊತ್ತು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷರಾದ ಸುನೀಲ ಮಹಾಂತಶೇಟ್ಟರ, ಕುಮಾರಸ್ವಾಮಿ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಕ್ಕಿರೇಶ ರಟ್ಟಿಹಳ್ಳಿ, ಲಿಂಗರಾಜ ಪಾಟೀಲ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗಂಗಾಧರ ಮೆಣಸಿನಕಾಯಿ, ಬಸವರಾಜ ಬಿಳಿಮಗ್ಗದ, ಪ್ರಶಾಂತ್ ಕುಮಾರ್ ಗುಡದಪ್ಪನವರ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಎಂ.ಎಸ್. ಕರೀಗೌಡ್ರ, ಹೆಮಗಿರಿಶ ಹಾವಿನಾಳ, ಅಜ್ಜಪ್ಪ ಲಿಂಬಿಕಾಯಿ, ನಾಗರಾಜ ಲಕ್ಕುಂಡಿ, ಅನಿಲ ಮುಳಗುಂದ, ಮಾಂತೇಶ ಅಡರಕಟ್ಟಿ, ಶರಣಪ್ಪ ಬಾರಕೇರ್, ನಿಂಗಪ್ಪ ಬನ್ನಿ, ಬಸವರಾಜ ಚಕ್ರಸಾಲಿ, ಅಶೋಕ ಶಿರಹಟ್ಟಿ, ಕೊಟ್ರೇಶಪ್ಪ ಅಂಗಡಿ, ರವೀಂದ್ರ ಗೌಡ ಪಾಟೀಲ್, ಸಂಜೀವ್ ದಾಸಾಯಿ, ವಿರೇಶ ಸಾಸಲವಾಡ, ವಿಜಯಕುಮಾರ್ ಕುಂಬಾರ್, ಪ್ರವೀಣ ಬೊಂಬಲೆ, ಶಿವಕುಮಾರ್ ಗೌಡನಾಯ್ಕರ, ಮೈಲಾರಪ್ಪ ಕಲ್ಕೇರಿ, ಬಸವರಾಜ ಚಿಗಣ್ಣವರ್, ಶಿವಕುಮಾರ್ ಕುರಿ, ನಾಗರಾಜ ಹೊಸೂರ್, ಪವಿತ್ರ ಕಲ್ಕುಟಗರ, ನಾಗೇಶ್ ಹುಬ್ಬಳ್ಳಿ, ಪವನ್ ಮೇಟಿ, ಕವಿತಾ ಉಳ್ಳಾಗಡ್ಡಿ, ಜ್ಯೋತಿ ಹಾನಗಲ್, ಪವನ್ ಲ್ಯಾಂಡ್ವೇ, ಪರಶುರಾಮ್ ಕರಡಿ ಕೊಳ್ಳ, ಸಿದ್ದು ದೇಸಾಯಿ, ದೇವಪ್ಪ ಇಟಗಿ, ಶಿವರಾಜ್ ರಾವಣಕಿ, ದ್ಯಾಮಣ್ಣ ತಳವಾರ, ರಾಮಣ್ಣ ಕಂಬಳಿ, ಅಕ್ಬರಸಾಬ್ ಯಾದಗಿರಿ, ಚೆನ್ನವೀರಗೌಡ ತೆಗ್ಗಿನಮನಿ, ವೀರೇಶ ತಂಗೋಡು, ಮಂಜುನಾಥ ಸಂಕಿನದಾಸರ್, ದೇವರಾಜ ಮೇಟಿ, ಡಿ.ವೈ. ಹುನಗುಂದ, ನೀಲಪ್ಪ ಹತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



