HomeGadag Newsಮುನ್ನೆಚ್ಚರಿಕೆಯಿಂದ ರೋಗಗಳನ್ನು ತಡೆಗಟ್ಟಿ : ಡಾ. ವ್ಹಿ.ಎ. ನಿಂಗೋಜಿ

ಮುನ್ನೆಚ್ಚರಿಕೆಯಿಂದ ರೋಗಗಳನ್ನು ತಡೆಗಟ್ಟಿ : ಡಾ. ವ್ಹಿ.ಎ. ನಿಂಗೋಜಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡರೆ ಸಮುದಾಯದ ಸ್ವಚ್ಛತೆ ತನ್ನಿಂದ ತಾನೇ ನಿರ್ಮಾಣವಾಗುತ್ತದೆ. ಈ ದಿಸೆಯಲ್ಲಿ ಜನರಲ್ಲಿ ಜಾಗೃತಿಯುಂಟುಮಾಡುವುದು ಅವಶ್ಯಕ ಎಂದು ಡಾ. ವ್ಹಿ.ಎ. ನಿಂಗೋಜಿ ಅಭಿಪ್ರಾಯಪಟ್ಟರು.

ಪಂ. ಪಂಚಾಕ್ಷರ ಗವಾಯಿಗಳವರ ಕಲಾ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಆಶ್ರಯದಲ್ಲಿ ಸ್ವಚ್ಛತಾ ಹೀ ಸೇವಾ ಸಪ್ತಾಹ ಕಾರ್ಯಕ್ರಮದ 5ನೇ ದಿನದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಎನ್‌ಎಸ್‌ಎಸ್ ಅಧಿಕಾರಿಗಳಾದ ಪ್ರೊ. ಎಂ.ಎಸ್. ಹೊಂಬಾಳಿ, ಗದುಗಿನ ಗಂಗಾಪೂರ ಪೇಟೆಯ ಓಣಿಯ ಎಲ್ಲಾ ಮಾತೆಯರನ್ನು ಸೇರಿಸಿ ಡೆಂಗ್ಯೂ ಮಲೇರಿಯಾ ರೋಗಕ್ಕೆ ನಾವೆಷ್ಟು ಕಾರಣ ಎಂಬುದರ ಬಗ್ಗೆ ತಿಳುವಳಿಕೆ ನೀಡಿದರು. ನಂತರ ಸ್ವಯಂ ಸೇವಕರು ಮನೆ ಮನೆಗೆ ತೆರಳಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಸಿಬ್ಬಂದಿಗಳಾದ ಪ್ರೊ. ಎಸ್.ಬಿ. ಅಂಗಡಿ, ಸುಭಾಸ ಓಂಕಾರ, ಬಸವರಾಜ ಕುಂಬಾರ, ಮಹಾಂತೇಶ ಗೊಲಪ್ಪನವರ ಪಾಲ್ಗೊಂಡಿದ್ದರು. ಪ್ರೊ. ಮಂಜುಳಾ ಎಸ್.ಹೊಂಬಾಳಿ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img