ಧಾರವಾಡ: ಧಾರವಾಡ ಜಿಲ್ಲೆ ಅಬಕಾರಿ ಇಲಾಖೆಯ ಅಬಕಾರಿ ಉಪ ಆಯುಕ್ತರ ಕಛೇರಿ ಮತ್ತು ವಲಯ ಕಛೇರಿಗಳಿಗೆ ಹೊಸದಾಗಿ ಹಂಚಿಕೆಯಾಗಿರುವ 6 ಹೊಸ ವಾಹನಗಳನ್ನು ಇಲಾಖೆಯ ದೈನಂದಿನ ಜಾರಿ ಮತ್ತು ತನಿಖಾ ಕಾರ್ಯಗಳಿಗಾಗಿ ಬಳಸಲು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಅಬಕಾರಿ ಉಪ ಆಯುಕ್ತರ ಕಛೇರಿಯಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ವಾಹನಗಳಿಗೆ ಚಾಲನೆ ನೀಡಿದರು ಎಂದು ಧಾರವಾಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ರಮೇಶ್‌ಕುಮಾರ್ ಹೆಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



