HomeKarnataka Newsಆತ್ಮಹತ್ಯೆಯಂತೆ ಬಿಂಬಿಸಿ ಅದ್ವೈತ್ ನಾಪತ್ತೆ? 3 ದಿನ ಶೋಧಿಸಿದರೂ ಸಿಗಲಿಲ್ಲ ಒಂದೇ ಒಂದು ಸುಳಿವು!

ಆತ್ಮಹತ್ಯೆಯಂತೆ ಬಿಂಬಿಸಿ ಅದ್ವೈತ್ ನಾಪತ್ತೆ? 3 ದಿನ ಶೋಧಿಸಿದರೂ ಸಿಗಲಿಲ್ಲ ಒಂದೇ ಒಂದು ಸುಳಿವು!

For Dai;y Updates Join Our whatsapp Group

ಬೆಂಗಳೂರು: ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಿ ಅದ್ವೈತ್ ಉದ್ದೇಶಪೂರ್ವಕವಾಗಿಯೇ ನಾಪತ್ತೆಯಾಗಿದ್ದಾನಾ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ.

ಕಳೆದ ಮೂರು ದಿನಗಳಿಂದ ಪೊಲೀಸರ ಐದು ತಂಡಗಳು ಶಿವಗಂಗೆ ಬೆಟ್ಟವನ್ನು ಇಂಚಿಂಚಾಗಿ ಪರಿಶೀಲನೆ ನಡೆಸಿವೆ. ಬೆಟ್ಟದ ಹಲವು ಭಾಗಗಳಲ್ಲಿ ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಅದ್ವೈತ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಅಥವಾ ಆತನಿಗೆ ಯಾವುದೇ ಅನಾಹುತ ಸಂಭವಿಸಿರುವುದಕ್ಕೆ ಪ್ರಮುಖ ಸುಳಿವು ಪತ್ತೆಯಾಗಿಲ್ಲ ಎನ್ನಲಾಗಿದೆ.

ನಾಪತ್ತೆಯಾಗುವ ಮುನ್ನ ಅದ್ವೈತ್ ಮದುವೆಯಾಗಬೇಕಿದ್ದ ಯುವತಿಗೆ ಶಿವಗಂಗೆ ಬೆಟ್ಟದಿಂದ ಫೋಟೋ ಕಳುಹಿಸಿದ್ದಾನೆ ಎನ್ನಲಾಗಿದೆ. ಆದರೆ ಅದರ ಬಳಿಕ ಯಾವುದೇ ಫೋನ್ ಕಾಲ್ ಅಥವಾ ಮೆಸೇಜ್ ಮಾಡಿಲ್ಲ.

ಹೀಗಾಗಿ ಆತ ಉದ್ದೇಶಪೂರ್ವಕವಾಗಿಯೇ ಮೊಬೈಲ್‌ನ್ನು ಬೆಟ್ಟದಲ್ಲಿ ಬಿಟ್ಟು ಹೋಗಿದ್ದಾನಾ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಮೊಬೈಲ್ ಪತ್ತೆಯಾದ ಸ್ಥಳ ಹಾಗೂ ಅದ್ವೈತ್ ಕೊನೆಯದಾಗಿ ನಡೆಸಿದ ಚಟುವಟಿಕೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದಕ್ಕೂ ಮುನ್ನ ಅದ್ವೈತ್ ಮನೆಯ ಲ್ಯಾಪ್‌ಟಾಪ್‌ನಲ್ಲಿ ಶಿವಗಂಗೆ ಬೆಟ್ಟ ಹಾಗೂ ಶಾಂತಲಾ ಡ್ರಾಪ್‌ಗೆ ಸಂಬಂಧಿಸಿದ ಮಾಹಿತಿಯನ್ನು ಸರ್ಚ್ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಜೊತೆಗೆ ChatGPTಯಲ್ಲಿ ಮಾಡಿದ್ದ ಕೆಲವು ಸರ್ಚ್ ಹಿಸ್ಟರಿಯೂ ಹಾಗೆಯೇ ಉಳಿದಿರುವುದು ತನಿಖಾಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ. ಈ ಸರ್ಚ್‌ಗಳು ಅದ್ವೈತ್ ನಾಪತ್ತೆಗೂ ಮುನ್ನ ನಡೆಸಿದ್ದ ಸಿದ್ಧತೆಯ ಭಾಗವಾಗಿದ್ದವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಅದ್ವೈತ್ ಟೆಕ್ಕಿಯಾಗಿದ್ದು, ತಾಂತ್ರಿಕವಾಗಿ ಪರಿಣತಿ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ತನ್ನ ಮೊಬೈಲ್ ಸೇರಿದಂತೆ ಕೆಲವು ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ಬಿಟ್ಟುಹೋಗುವ ರೀತಿಯಲ್ಲಿ ಯಾವುದೇ ಯೋಜನೆ ರೂಪಿಸಿದ್ದಾನಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಅದ್ವೈತ್‌ನ ವೈಯಕ್ತಿಕ ಹಿನ್ನೆಲೆಯನ್ನೂ ಪೊಲೀಸರು ಪರಿಶೀಲಿಸಿದ್ದು, ಹಲವು ಯುವತಿಯರೊಂದಿಗೆ ಆತ ಸಲುಗೆಯಿಂದ ಸಂಪರ್ಕ ಹೊಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಈ ಸಂಪರ್ಕಗಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದವೆಯೇ ಎಂಬುದನ್ನು ಕೂಡ ತನಿಖೆ ಮಾಡಲಾಗುತ್ತಿದೆ.

ಅದ್ವೈತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಯಾವುದೇ ಖಚಿತ ಸಾಕ್ಷ್ಯ ಈವರೆಗೆ ಸಿಕ್ಕಿಲ್ಲ. ಮೂರು ದಿನಗಳ ಕಾಲ ಐದು ಪೊಲೀಸ್ ತಂಡಗಳು ಬೆಟ್ಟದ ವಿವಿಧ ಭಾಗಗಳಲ್ಲಿ ಶೋಧ ನಡೆಸಿದರೂ ಮೃತದೇಹ ಅಥವಾ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಮುಖ ಸುಳಿವು ಪತ್ತೆಯಾಗದಿರುವುದು ಪೊಲೀಸರ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.

ಹೀಗಾಗಿ ಆತ ಮೊದಲೇ ಯೋಜನೆ ರೂಪಿಸಿಕೊಂಡು ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿದ್ದಾನಾ ಎಂಬ ಅನುಮಾನ ಮತ್ತಷ್ಟು ಬಲಗೊಂಡಿದೆ ಎನ್ನಲಾಗಿದೆ.

ಸದ್ಯ ಅದ್ವೈತ್ ನಾಪತ್ತೆಯಾಗಿರುವ ಹಿಂದಿನ ನಿಜವಾದ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೊಬೈಲ್‌, ಲ್ಯಾಪ್‌ಟಾಪ್‌ ಹಾಗೂ ಇತರ ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ಮುಂದುವರಿದಿದ್ದು, ಮಹತ್ವದ ಸುಳಿವು ಸಿಕ್ಕರೆ ಮುಂದಿನ ಒಂದೆರಡು ದಿನಗಳಲ್ಲಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img