HomeGadag Newsಭಗವಾನ್ ಮಾತಿಗೆ ಮಹತ್ವ ಕೊಡಬೇಡಿ : ಬಸವರಾಜ್ ಬೊಮ್ಮಾಯಿ

ಭಗವಾನ್ ಮಾತಿಗೆ ಮಹತ್ವ ಕೊಡಬೇಡಿ : ಬಸವರಾಜ್ ಬೊಮ್ಮಾಯಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಪ್ರೊ.ಕೆ. ಎಸ್ ಭಗವಾನ್ ತಾಯಿ ಚಾಮುಂಡೇಶ್ವರಿ ವಿಚಾರದಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮಾತಿಗೆ ಯಾರೂ ಮಹತ್ವ ಕೊಟ್ಟಿಲ್ಲ, ಕೊಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರೊ. ಭಗವಾನ್ ಅವರು ಹೆಸರಿಗೆ ತಕ್ಕಂಗೆ ಭಗವಂತನ ಮೇಲೆ ನಂಬಿಕೆ ಇಲ್ಲವೆಂದರೆ, ಭಗವಾನ್ ಎಂದು ಹೆಸರು ಇಟ್ಟಿಕೊಂಡಿದ್ದೇ ಅಪಾರ್ಥವಾಗಿದೆ ಎಂದು ಹೇಳಿದರು.

ಒಂದು ಧರ್ಮದ ವಿರುದ್ಧ ಮಾತನಾಡುವುದು ಯಾವುದೇ ಮಾನವೀಯ ಧರ್ಮವಲ್ಲ. ಚಾಮುಂಡೇಶ್ವರಿ ಕಾಲ್ಪನಿಕ ಎಂದು ಹೇಳುತ್ತಾರೆ. ಚಾಮುಂಡೇಶ್ವರಿ ಕಾಲ್ಪನಿಕ ಅಂದರೆ, ಮಹಿಷಾಸುರನೂ ಕಾಲ್ಪನಿಕವೇ?

ಮಹಿಷಾಸುರನ ಆರಾಧನೆ ಮಾಡುತ್ತಾರೆ. ಇತರಹ ದ್ವಂದ್ವ ವಿಪರ್ಯಾಸದಿಂದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಇದಕ್ಕೆ ಯಾರೂ ಮಹತ್ವ ಕೊಡಬಾರದು. ವಾಸ್ತವ ಅಂಶ ಗೊತ್ತಿದ್ದರೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಬೊಮ್ಮಾಯಿ ಆರೋಪಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img