HomeLife Styleನಿಂಬೆ ನೀರು ಕುಡಿಯುವುದರಿಂದ ದೇಹ ನಿಜವಾಗಿಯೂ ಡಿಟಾಕ್ಸ್ ಆಗುತ್ತದೆಯೇ? ಇಲ್ಲಿದೆ ಉತ್ತರ

ನಿಂಬೆ ನೀರು ಕುಡಿಯುವುದರಿಂದ ದೇಹ ನಿಜವಾಗಿಯೂ ಡಿಟಾಕ್ಸ್ ಆಗುತ್ತದೆಯೇ? ಇಲ್ಲಿದೆ ಉತ್ತರ

For Dai;y Updates Join Our whatsapp Group

Spread the love

ನಿಂಬೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಇದರಲ್ಲಿ ವಿಟಮಿನ್ C ಸಮೃದ್ಧವಾಗಿದ್ದು, ಆಂಟಿ-ಆಕ್ಸಿಡೆಂಟ್ ಗುಣಗಳೂ ಇದ್ದವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂಬೆ ನೀರಿನ ಹಲವು ಲಾಭಗಳ ಕುರಿತು ಹೇಳಲಾಗುತ್ತಿದ್ದು,

ನಿಯಮಿತವಾಗಿ ನಿಂಬೆ ನೀರು ಕುಡಿಯುವುದರಿಂದ ದೇಹದಲ್ಲಿನ ವಿಷಪದಾರ್ಥಗಳು ಸುಲಭವಾಗಿ ಹೊರಹೋಗುತ್ತವೆ ಎಂಬ ಮಾತು ಹರಿದಾಡುತ್ತಿದೆ. ಆದರೆ ಈ ಹೇಳಿಕೆ ಎಷ್ಟು ಸತ್ಯ? ನಿಂಬೆ ನೀರು ನಿಜವಾಗಿಯೂ ದೇಹವನ್ನು ಸಂಪೂರ್ಣವಾಗಿ ಡಿಟಾಕ್ಸ್ ಮಾಡುತ್ತದೆಯೇ? ಈ ಬಗ್ಗೆ ಆಯುರ್ವೇದ ತಜ್ಞರು ಸ್ಪಷ್ಟನೆ ನೀಡಿದ್ದಾರೆ.

ದೆಹಲಿ ಮೂಲದ ಆಯುರ್ವೇದ ತಜ್ಞೆ ಡಾ. ಚಂಚಲ್ ಶರ್ಮಾ ಅವರ ಪ್ರಕಾರ, ನಿಂಬೆ ನೀರು ಎಲ್ಲರಿಗೂ ಸಮಾನವಾಗಿ ಪ್ರಯೋಜನಕಾರಿ ಆಗುವುದಿಲ್ಲ.

ಪ್ರತಿಯೊಬ್ಬರ ದೇಹದ ಸ್ವಭಾವ ಮತ್ತು ಕಾರ್ಯಪದ್ಧತಿ ವಿಭಿನ್ನವಾಗಿರುತ್ತದೆ. ನಮ್ಮ ದೇಹದಲ್ಲಿರುವ ಮೂತ್ರಪಿಂಡಗಳು (ಕಿಡ್ನಿ), ಯಕೃತ್ತು (ಲಿವರ್) ಹಾಗೂ ಜೀರ್ಣಾಂಗ ವ್ಯವಸ್ಥೆ ಸ್ವಾಭಾವಿಕವಾಗಿ ದೇಹದಲ್ಲಿನ ಕಸದ ಪದಾರ್ಥಗಳನ್ನು ಹೊರಹಾಕುವ ಕಾರ್ಯವನ್ನು ನಿರ್ವಹಿಸುತ್ತವೆ.

ನಿಂಬೆ ನೀರು ಈ ಪ್ರಕ್ರಿಯೆಗೆ ಸಹಾಯ ಮಾಡಬಹುದು, ಆದರೆ ಇದರಿಂದ ದೇಹ ಸಂಪೂರ್ಣವಾಗಿ ಡಿಟಾಕ್ಸ್ ಆಗುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ನಿಂಬೆ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನಗಳು

ಜೀರ್ಣಕ್ರಿಯೆ ಸುಧಾರಣೆ:
ನಿಂಬೆ ವಿಟಮಿನ್ C ಯ ಪ್ರಾಕೃತಿಕ ಮೂಲವಾಗಿದೆ. ಇದರಲ್ಲಿ ಇರುವ ಆಂಟಿ-ಆಕ್ಸಿಡೆಂಟ್ ಗುಣಗಳು ಜೀರ್ಣಕ ಎನ್ಜೈಮ್‌ಗಳನ್ನು ಚುರುಕುಗೊಳಿಸಿ, ಮಲಬದ್ಧತೆ ಸಮಸ್ಯೆ ನಿವಾರಣೆಗೆ ನೆರವಾಗುತ್ತವೆ.

ಯಕೃತ್ತಿಗೆ ಸಹಕಾರಿ:
ಕೆಲವರು ನಿಂಬೆ ನೀರು ಯಕೃತ್ತನ್ನು ಶುದ್ಧಗೊಳಿಸುತ್ತದೆ ಎಂದು ನಂಬುತ್ತಾರೆ. ತಜ್ಞರ ಪ್ರಕಾರ, ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವ ಮೂಲಕ ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕುವ ಪ್ರಕ್ರಿಯೆಗೆ ನೆರವಾಗುತ್ತದೆ.

ತೂಕ ನಿಯಂತ್ರಣಕ್ಕೆ ನೆರವು:
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ನಿಂಬೆ ನೀರನ್ನು ನಿಯಮಿತವಾಗಿ ಸೇವಿಸಬಹುದು. ಇದು ಮೆಟಾಬಾಲಿಸಂ ಚುರುಕುಗೊಳಿಸಲು ಸಹಾಯ ಮಾಡಿ ತೂಕ ನಿಯಂತ್ರಣಕ್ಕೆ ಪೂರಕವಾಗುತ್ತದೆ.

ಪ್ರತಿದಿನ ನಿಂಬೆ ನೀರು ಕುಡಿಯಬೇಕೇ?

ನಿಂಬೆ ನೀರು ಹಲವು ಲಾಭಗಳನ್ನು ನೀಡಿದರೂ, ಅದನ್ನು ಪ್ರತಿದಿನ ಕಡ್ಡಾಯವಾಗಿ ಕುಡಿಯಲೇಬೇಕು ಎಂಬುದಿಲ್ಲ. ವಾರದಲ್ಲಿ ನಾಲ್ಕು ರಿಂದ ಐದು ದಿನ ಸೇವಿಸಿದರೆ ಸಾಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಅಥವಾ ಹಲ್ಲು ನೋವಿನ ತೊಂದರೆ ಇರುವವರು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸೇವಿಸುವುದನ್ನು ತಪ್ಪಿಸಬೇಕು. ಹೆಚ್ಚು ಪ್ರಮಾಣದಲ್ಲಿ ಕುಡಿದರೆ ಹೊಟ್ಟೆ ಉರಿ ಉಂಟಾಗುವ ಸಾಧ್ಯತೆ ಇದೆ.

ಇದಲ್ಲದೆ, ನಿಂಬೆ ನೀರಿಗೆ ಸಕ್ಕರೆ ಅಥವಾ ಹೆಚ್ಚಿನ ಉಪ್ಪು ಸೇರಿಸುವುದು ಆರೋಗ್ಯಕರವಲ್ಲ. ಒಟ್ಟಾರೆ, ನಿಂಬೆ ನೀರು ಆರೋಗ್ಯಕ್ಕೆ ಸಹಾಯಕವಾದ ಪಾನೀಯವಾಗಿದ್ದರೂ, ದೇಹವನ್ನು ಸಂಪೂರ್ಣವಾಗಿ ಡಿಟಾಕ್ಸ್ ಮಾಡುತ್ತದೆ ಎಂಬ ಹೇಳಿಕೆ ವೈಜ್ಞಾನಿಕವಾಗಿ ದೃಢಪಟ್ಟಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!