HomeLife Styleಪೂಜೆಯ ಹೂವು ಎಸೆಯಬೇಡಿ! ಮನೆಯಲ್ಲೇ ಕೆಮಿಕಲ್‌ ಫ್ರೀ ಧೂಪ ತಯಾರಿಸುವ ಸುಲಭ ವಿಧಾನ

ಪೂಜೆಯ ಹೂವು ಎಸೆಯಬೇಡಿ! ಮನೆಯಲ್ಲೇ ಕೆಮಿಕಲ್‌ ಫ್ರೀ ಧೂಪ ತಯಾರಿಸುವ ಸುಲಭ ವಿಧಾನ

For Dai;y Updates Join Our whatsapp Group

ಮನೆಯಲ್ಲಿ ದೈನಂದಿನ ಪೂಜೆ, ವರಮಹಾಲಕ್ಷ್ಮಿ ಹಬ್ಬ, ಗೌರಿ-ಗಣೇಶ ಹಬ್ಬ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಲ್ಲಿ ದೇವರಿಗೆ ಅರ್ಪಿಸಿದ ಹೂವುಗಳನ್ನು ಮರುದಿನ ಎಸೆಯುವುದು ಸಾಮಾನ್ಯ.

ಆದರೆ ಈ ಪೂಜಾ ಹೂವುಗಳನ್ನು ತ್ಯಾಜ್ಯವಾಗಿ ಎಸೆಯುವ ಬದಲು ಮರುಬಳಕೆ ಮಾಡಿ ಮನೆಯಲ್ಲೇ ಕೆಮಿಕಲ್‌ ಫ್ರೀ ಧೂಪ ತಯಾರಿಸಬಹುದು. ಇದರಿಂದ ಪರಿಸರ ಸ್ನೇಹಿ ಪರ್ಯಾಯ ಸಿಗುವುದರ ಜೊತೆಗೆ ನೈಸರ್ಗಿಕ ಸುವಾಸನೆಯ ಧೂಪವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು.

ದೇವರಿಗೆ ಅರ್ಪಿಸಿದ ದಾಸವಾಳ, ಸೇವಂತಿಗೆ, ಚೆಂಡುಹೂವು, ಮಲ್ಲಿಗೆ, ಗುಲಾಬಿ ಸೇರಿದಂತೆ ವಿವಿಧ ಹೂವುಗಳ ದಳಗಳನ್ನು ಬಳಸಿಕೊಂಡು ಯಾವುದೇ ರಾಸಾಯನಿಕವಿಲ್ಲದ ಧೂಪವನ್ನು ತಯಾರಿಸಬಹುದು. ಈ ವಿಧಾನ ಸರಳವಾಗಿದ್ದು, ಮನೆಯಲ್ಲಿರುವ ಕೆಲವೇ ಸಾಮಗ್ರಿಗಳಿಂದ ಇದನ್ನು ಸಿದ್ಧಪಡಿಸಬಹುದು.

ಮೊದಲು ಹೂವುಗಳನ್ನು ಚೆನ್ನಾಗಿ ಒಣಗಿಸಬೇಕು:

ಪೂಜೆಯಲ್ಲಿ ಬಳಸಿದ ಹೂವುಗಳ ದಳಗಳನ್ನು ಪ್ರತ್ಯೇಕವಾಗಿ ತೆಗೆದು ಸ್ವಚ್ಛವಾದ ಬಟ್ಟೆ ಅಥವಾ ತಟ್ಟೆಯ ಮೇಲೆ ಹರಡಬೇಕು. ನಂತರ ಉತ್ತಮ ಗಾಳಿ ಮತ್ತು ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ 2ರಿಂದ 3 ದಿನಗಳವರೆಗೆ ಸಂಪೂರ್ಣ ಒಣಗಿಸಬೇಕು. ಹೂವುಗಳಲ್ಲಿ ಯಾವುದೇ ತೇವಾಂಶ ಉಳಿಯದಂತೆ ನೋಡಿಕೊಳ್ಳುವುದು ಮುಖ್ಯ. ಸಮಯದ ಅಭಾವ ಇದ್ದರೆ ಹೂವಿನ ದಳಗಳನ್ನು ಸ್ವಲ್ಪ ಹೊತ್ತು ಡ್ರೈ ರೋಸ್ಟ್‌ ಮಾಡಿ ಒಣಗಿಸಬಹುದು.

ಹೂವಿನ ದಳಗಳನ್ನು ಪುಡಿ ಮಾಡಿ:

ಹೂವುಗಳು ಸಂಪೂರ್ಣ ಒಣಗಿದ ಬಳಿಕ ಅವುಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಬೇಕು. ನಂತರ ಈ ಪುಡಿಗೆ ತೆಂಗಿನ ನಾರು, ಹವನ ಸಾಮಗ್ರಿ, ಗಗ್ಗುಳ, ಶ್ರೀಗಂಧ, ಸಾಂಬ್ರಾಣಿ ಅಥವಾ ಕರ್ಪೂರದಂತಹ ನೈಸರ್ಗಿಕ ಸುಗಂಧ ದ್ರವ್ಯಗಳನ್ನು ಸೇರಿಸಿ ಮತ್ತೆ ಚೆನ್ನಾಗಿ ಪುಡಿ ಮಾಡಬೇಕು. ಬಳಿಕ ಜರಡಿಯ ಮೂಲಕ ಶೋಧಿಸಿ ಮೃದುವಾದ ಪುಡಿಯನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬಹುದು.

ಇಚ್ಛೆಯಿದ್ದರೆ ಈ ಮಿಶ್ರಣಕ್ಕೆ ಪಲಾವ್‌ ಎಲೆ, ದಾಲ್ಚಿನ್ನಿ ಹಾಗೂ ಹಸುವಿನ ಒಣ ಸಗಣಿಯನ್ನು ಸೇರಿಸಬಹುದು. ಇವುಗಳಿಂದ ಧೂಪದ ಪರಿಮಳ ಹೆಚ್ಚುವುದರ ಜೊತೆಗೆ ಸೊಳ್ಳೆ ಹಾಗೂ ಇತರ ಕೀಟಗಳು ಮನೆಯೊಳಗೆ ಪ್ರವೇಶಿಸುವುದನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು.

ಕೋನ್‌ ಆಕಾರದ ಧೂಪ ತಯಾರಿಸುವ ವಿಧಾನ:

ತಯಾರಿಸಿದ ಹೂವಿನ ಪುಡಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಮೃದುವಾದ ಮಿಶ್ರಣ ತಯಾರಿಸಬೇಕು. ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಕೈಯಿಂದ ಕೋನ್‌ ಆಕಾರದಲ್ಲಿ ಧೂಪವನ್ನು ರೂಪಿಸಬೇಕು.

ನೆರಳಿನಲ್ಲಿ ಒಣಗಿಸಿದರೆ ಬಳಕೆಗೆ ಸಿದ್ಧ:

ತಯಾರಾದ ಧೂಪಗಳನ್ನು ಸ್ವಚ್ಛವಾದ ತಟ್ಟೆ ಅಥವಾ ಬಟ್ಟೆಯ ಮೇಲೆ ಇಟ್ಟು ನೆರಳಿರುವ ಹಾಗೂ ಗಾಳಿ ಚೆನ್ನಾಗಿ ಬೀಸುವ ಸ್ಥಳದಲ್ಲಿ 1ರಿಂದ 2 ದಿನಗಳವರೆಗೆ ಒಣಗಿಸಬೇಕು. ನೇರ ಸೂರ್ಯನ ಬೆಳಕಿನಲ್ಲಿ ಒಣಗಿಸುವುದನ್ನು ತಪ್ಪಿಸಬೇಕು, ಏಕೆಂದರೆ ಇದರಿಂದ ಧೂಪದ ನೈಸರ್ಗಿಕ ಸುವಾಸನೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ಧೂಪಗಳು ಸಂಪೂರ್ಣವಾಗಿ ಒಣಗಿದ ಬಳಿಕ ಅವುಗಳನ್ನು ಪೂಜೆಯ ಸಮಯದಲ್ಲಿ ಬಳಸಬಹುದು. ಈ ವಿಧಾನದಿಂದ ಪೂಜಾ ಹೂವುಗಳ ಮರುಬಳಕೆ ಸಾಧ್ಯವಾಗುವುದರ ಜೊತೆಗೆ ಮನೆಯಲ್ಲಿಯೇ ನೈಸರ್ಗಿಕ, ಕೆಮಿಕಲ್‌ ಫ್ರೀ ಹಾಗೂ ಪರಿಸರ ಸ್ನೇಹಿ ಧೂಪವನ್ನು ತಯಾರಿಸಿಕೊಳ್ಳಬಹುದು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img