HomePolitics Newsಎತ್ತಿನಹೊಳೆ ಯೋಜನೆ: ಪೂರ್ಣಾಹುತಿ ಹೋಮ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್‌ ಭಾಗಿ

ಎತ್ತಿನಹೊಳೆ ಯೋಜನೆ: ಪೂರ್ಣಾಹುತಿ ಹೋಮ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್‌ ಭಾಗಿ

For Dai;y Updates Join Our whatsapp Group

ಹಾಸನ: ಬಯಲುಸೀಮೆ ಜಿಲ್ಲೆಗಳ ಜನರ ದಶಕಗಳ ಕನಸು ಈಡೇರುವ ಸಮಯ ಬಂದಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ ಒಂದು ಇಂದು ಉದ್ಘಾಟನೆಯಾಗಲಿದೆ. ಸಕಲೇಶ್ವರದಿಂದ ಗ್ರ್ಯಾವಿಟಿ ಮೂಲಕ ನೀರು ಹರಿಸುವ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಇದಾಗಿದೆ‌‌.

ಇನ್ನೂ ಪೂರ್ಣಾಹುತಿ ಹೋಮ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ ಭಾಗಿಯಾದರು. 9 ಪೂರ್ಣಾಹುತಿ ಕುಂಭಗಳಿಗೆ ಬಿಲ್ವ ಪತ್ರೆ ಹಿಡಿದು ಪೂಜೆ ಸಲ್ಲಿಸಿದರಲ್ಲದೇ ಭಕ್ತಿ ಭಾವರಿಂದ ಪೂಜೆ ನೆರವೇರಿಸಿದರು. ಇದೇ ವೇಳೆ ಗಣಪತಿ, ವಾಸ್ತು, ಮೃತ್ಯುಂಜಯ, ನವಗ್ರಹ ಹೋಮಗಳನ್ನು ನೆರವೇರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆಶಿ,

ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಇದು ಐತಿಹಾಸಿಕ ದಿನ, ಐತಿಹಾಸಿಕ ಕ್ಷಣ. ಇದು ಇತ್ತೀಚಿನ ವರ್ಷಗಳಲ್ಲಿ ಅತಿ ದೊಡ್ಡ ಯೋಜನೆ. ರಾಜ್ಯದ ಜನತೆಗೆ ತುಂಬಾ ಸಂತೋಷವಾಗಿದೆ. ಗೌರಿ ಹಬ್ಬದ ದಿನವೇ ಗಂಗೆ ಪೂಜೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಭಗೀರಥ ಪ್ರಯತ್ನ ಮಾಡಿ ಯೋಜನೆ ಮಾಡಿದೆ. ಈ ಯೋಜನೆ ಜಾರಿ ಸಾದ್ಯವೇ ಇಲ್ಲ ಎಂದಿದ್ದರು, ಆದರೆ ನಾವು ಸವಾಲಾಗಿ ಸ್ವೀಕಾರ ಮಾಡಿ ಜಾರಿ ಮಾಡಿದ್ದೇವೆ ಎಂದು ಬೀಗಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img