HomeGadag Newsಸ್ಪಷ್ಟ ಗುರಿಯೊಂದಿಗೆ ಮುನ್ನುಗ್ಗಿ : ಡಾ. ಡಿ.ಬಿ. ಗವಾನಿ

ಸ್ಪಷ್ಟ ಗುರಿಯೊಂದಿಗೆ ಮುನ್ನುಗ್ಗಿ : ಡಾ. ಡಿ.ಬಿ. ಗವಾನಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಭವಿಷ್ಯದಲ್ಲಿ ವಿದ್ಯಾರ್ಥಿನಿಯರು ಜೀವನದಲ್ಲಿ ಸ್ಪಷ್ಟ ಗುರಿಯೆಡೆಗೆ ಶಿಸ್ತಿನಿಂದ ಸಾಗಿದರೆ ಉತ್ತುಂಗಕ್ಕೆ ಏರಬಹುದು. ಜೊತೆಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದು ಕೆ.ವಿ.ಎಸ್.ಆರ್ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಗವಾನಿ ಹೇಳಿದರು.

ನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನ 2023-24ನೇ ಸಾಲಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಬಿ.ಎ ಮತ್ತು ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯರಾದ ಎಂ.ಯು. ಹಿರೇಮಠ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ವ್ಯಕ್ತಿತ್ವವನ್ನು ಅಂಕಗಳ ಆಧಾರದಿಂದ ಅಳೆಯಲಾಗದು. ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಸ್ವಂತಿಕೆಯಿಂದ ಕಲಿತಾಗ ಯಶಸ್ಸು ಕಾಣಬಹುದು. ಪ್ರಾಮಾಣಿಕವಾದ ಜೀವನದಿಂದ ನಿಖರವಾದ ಗುರಿ ತಲುಪಲು ಸಾಧ್ಯವಿದೆ ಎಂದರು.

ವ್ಯವಸ್ಥಾಪಕ ಎಫ್.ಎಸ್. ಕರಬುಡ್ಡಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ನ್ಯೂನ್ಯತೆಗಳನ್ನು ಜಪಿಸದೆ ಸಾಧನೆ ಮಾಡಬೇಕೆಂಬ ಛಲ ಹೊಂದಿದರೆ ಉತ್ತಮ ಸಾಧನೆ ಮಾಡಬಹುದು ಎಂದರು.

ಡಾ.ಪ್ರಕಾಶ ದೇಶಪಾಂಡೆ, ಪ್ರೊ. ಎಸ್.ಯು. ಸಜ್ಜನಶೆಟ್ಟರ್ ಮಾತನಾಡಿದರು. ಡಾ. ಎಸ್.ಕೆ. ಪೂಜಾರ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಎಸ್.ಎಚ್. ಬಡೇಖಾನ, ಪ್ರೊ. ಪ್ರಕಾಶ ಕರಿಗಾರ, ಪ್ರೊ. ಮಹಾಲಕ್ಷ್ಮಿ ಹುಟಗಿ, ಪ್ರೊ. ಸತೀಶ ಸರ್ವಿ, ಡಾ. ದ್ಯಾಮನ್ನ ಮನಕಟ್ಟಿ, ಪ್ರೊ. ಕೃಷ್ಣಪ್ಪ ಬೆಂತೂರ, ಡಾ.ಸುಜಾತಾ ಬರದೂರ. ಪ್ರೊ. ರಶ್ಮಿ ಹೂಗಾರ, ಪ್ರೊ. ಶ್ರೀದೇವಿ ದಾಸರ, ಪ್ರೊ. ರಿಯಾಜಅಹ್ಮದ ದೊಡ್ಡಮನಿ, ಪ್ರೊ. ಪ್ರತಿಭಾ ಚವ್ಹಾಣ, ಪ್ರೊ. ಸುಮಿತ್ರಾ ಮೇದಾರ, ಪ್ರೊ. ಮಹೇಶಗೌಡ್ರ ಪಾಟೀಲ್, ಪ್ರೊ. ವಹಿದಾ ಕಿಲ್ಲೆದಾರ, ಸಿಬ್ಬಂದಿಗಳಾದ ಲಕ್ಷ್ಮಿ ನಾಗರಾಳ, ಶ್ರೀದೇವಿ, ಬಸುರಾಜ ದಾಣಿ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img