Homecultureಗಾಂಧೀಜಿ ನೆನಪು ಚಿರಸ್ಥಾಯಿ : ಸುಜಾತಾ ದೊಡ್ಡಮನಿ

ಗಾಂಧೀಜಿ ನೆನಪು ಚಿರಸ್ಥಾಯಿ : ಸುಜಾತಾ ದೊಡ್ಡಮನಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಹಾಗೂ ಅವರು ಬೆಳಗಾವಿ ಸ್ವಾತಂತ್ರ‍್ಯ ಸಂಗ್ರಾಮದ ನೇತೃತ್ವವಹಿಸಿ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ ಶಿಗ್ಲಿ ಗ್ರಾಮದ ಬಳಿಗಾರ ಕಾಲೇಜಿನಿಂದ ಬಜಾರ ಮಾರ್ಗವಾಗಿ ಸೇವಾಮಂದಿರದವರೆಗೆ ಹಮ್ಮಿಕೊಂಡಿದ್ದ `ಗಾಂಧಿ ನಡಿಗೆ’ ಪಾದಯಾತ್ರೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಉಸ್ತುವಾರಿ ಮೋಹನ ಅಸುಂಡಿ ಅವರು, ಗಾಂಧೀಜಿಯವರು ಬದುಕಿನ ಆದರ್ಶ. ಗಾಂಧೀಜಿ ತನ್ನ ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನರಾಗಿದ್ದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿ ಇದೀಗ ನೂರು ವರ್ಷಗಳು ಪೂರೈಸಿದ್ದು, ಇದನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಗಾಂಧೀಜಿಯವರ ನೆನಪಿನ ಹೆಜ್ಜೆಗಳು ಸದಾ ಚಿರಸ್ಥಾಯಿಯಾಗಿ ಉಳಿದಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಫೀರದೋಷ್ ಆಡೂರ, ಮುಖಂಡರಾದ ಗುರುನಾಥ ದಾನಪ್ಪನವರ, ರಾಮಣ್ಣ ಲಮಾಣಿ(ಶಿಗ್ಲಿ), ದೀಪಕ್ ಲಮಾಣಿ, ರಾಜಣ್ಣ ಕುಂಬಿ, ರಾಜಣ್ಣ ಮಡಿವಾಳರ, ಬಾಲೇಹೊಸರಿನ ಬಸುವರೆಡ್ಡಿ, ಯಲ್ಲಪ್ಪ ತಳವಾರ, ಬಾಬಣ್ಣ ಅಳವಂಡಿ, ರಾಜು ಓಲೆಕಾರ, ರಫೀಕ್ ಕಲಬುರ್ಗಿ, ವಿಜಯ. ಕರಡಿ, ರಾಮಣ್ಣ ರಿತ್ತಿ, ರಮೇಶ ಗಡದವರ ಸಾಹೇಬಜಾನ ಹವಾಲ್ದಾರ ಮಹಾಂತೇಶ ಗುಡಸಲಮನಿ, ಸದಾನಂದ ನಂದೆಣ್ಣವರ, ಯಲ್ಲಪ್ಪ ಸೂರಣಗಿ, ಸಿದ್ದು ದುರಗಣ್ಣವರ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.

ಕಾಂಗ್ರೆಸ್ ಪಕ್ಷದ ನಾಯಕರು ಜೂಮ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ಉಸ್ತುವಾರಿ ಮೋಹನ ಅಸುಂಡಿ, ಗುರುನಾಥ ದಾನಪ್ಪನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಆರ್. ಕೊಪ್ಪದ, ಲಕ್ಷ್ಮೇಶ್ವರ ನಗರ ಘಟಕ ಅಧ್ಯಕ್ಷ ಅಮರೀಶ ತೆಂಬದಮನಿ, ಪುರಸಭೆ ಉಪಾಧ್ಯಕ್ಷ ಫೀರದೋಷ್ ಆಡೂರ, ರಾಮಣ್ಣ ಲಮಾಣಿ (ಶಿಗ್ಲಿ )ಬಾಬಣ್ಣ ಅಳವಂಡಿ ಮುಂತಾದವರಿದ್ದರು.

ವಕೀಲ ಎಸ್.ಪಿ. ಬಳಿಗಾರ, ಯುವ ಮುಖಂಡ ಸೋಮಣ್ಣ ಬೆಟಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ ಮಾತನಾಡಿ, ಶಿಗ್ಲಿ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟ ಚಳುವಳಿಯಲ್ಲಿ ಯಾವ ತರಹ ಹೋರಾಟ ಮಾಡಬೇಕು ಎಂದು ಹೋರಾಟಗಾರರಿಗೆ ಸ್ವತಃ ಗಾಂಧೀಜಿಯವರೇ ಪತ್ರ ಬರೆದಿದ್ದರು ಎಂಬುದು ಇತಿಹಾಸ ಎಂದರು.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img