HomeKarnataka Newsಉಗ್ರರ ಗುಂಡಿಗೆ ಬಲಿಯಾದ ಭರತ್ ಭೂಷಣ್ ಅಂತಿಮ ದರ್ಶನ ಪಡೆದ ರಾಜ್ಯಪಾಲರು!

ಉಗ್ರರ ಗುಂಡಿಗೆ ಬಲಿಯಾದ ಭರತ್ ಭೂಷಣ್ ಅಂತಿಮ ದರ್ಶನ ಪಡೆದ ರಾಜ್ಯಪಾಲರು!

For Dai;y Updates Join Our whatsapp Group

Spread the love

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಹಲ್ಗಾಮ್‌ನಲ್ಲಿ ಉಗ್ರರಿಂದ ಹತ್ಯೆಯಾದ ನಗರದ ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆದರು. ಮೃತ ಭರತ್ ಭೂಷಣ್ ಅಂತಿಮ ದರ್ಶನ ಪಡೆದ ರಾಜ್ಯಪಾಲರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಭರತ್ ಭೂಷಣ್ ಅವರ ಅಣ್ಣ ಪ್ರೀತಂರಿಂದ ಘಟನೆಯ ಕುರಿತು ಮಾಹಿತಿ ಪಡೆದರು.

ಬೆಳಗ್ಗೆ 5:30ರ ವೇಳೆಗೆ ಭರತ್ ಭೂಷಣ್ ಮೃತದೇಹ ಸುಂದರ ನಗರಕ್ಕೆ ಆಗಮಿಸಿತು. ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ, ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭರತ್ ಭೂಷಣ್ ನಿವಾಸದ ಸುತ್ತ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಭರತ್ ಸ್ಮರಣೆಗಾಗಿ ಪಾರ್ಕ್‌ಗೆ ಭರತ್ ಭೂಷಣ್ ಪಾರ್ಕ್ ಎಂದು ನಾಮಕರಣ ಮಾಡಲಾಗಿದೆ.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ವಾರ್ಡ್‌ನ ಪಾರ್ಕ್ ಇದಾಗಿದ್ದು, ಭರತ್ ಭೂಷಣ್ ನಿವಾಸದ ಬಳಿ ಇದೆ. ಅಲ್ಲದೇ ಭರತ್ ಭೂಷಣ್ ಇದೇ ಪಾರ್ಕ್‌ನಲ್ಲಿ ಪ್ರತಿದಿನ ವಾಕಿಂಗ್ ಮಾಡುತ್ತಿದ್ದರು. ಪಾರ್ಕ್ ಒಳಗಿನ ಸಬಾಂಗಣದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಭರತ್ ಅದರಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!