Homecultureಪೈಗಂಬರರ ಉಪದೇಶಗಳನ್ನು ಪಾಲಿಸಿ : ಮೌಲಾನಾ ನಿಜಾಮ ಖಾದ್ರಿ

ಪೈಗಂಬರರ ಉಪದೇಶಗಳನ್ನು ಪಾಲಿಸಿ : ಮೌಲಾನಾ ನಿಜಾಮ ಖಾದ್ರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಅಂಜುಮನ್ ಏ ಇಸ್ಲಾಂ ಕಮಿಟಿಯ ಆಶ್ರಯದಲ್ಲಿ ಹಜರತ್ ಮುಹಮ್ಮದ್ ಪೈಗಂಬರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜಯಂತಿಯ ನಿಮಿತ್ತ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಪಾಪನಾಶಿ ರಸ್ತೆಯಲ್ಲಿರುವ ಮೆಹಬೂಬ ಸುಬಾನಿ ದರ್ಗಾದ ಹತ್ತಿರ ಮೌಲಾನಾ ಸಲೀಂ ಸಖಾಫಿ ಅವರು ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಮುಹಮ್ಮದ್ ಪೈಗಂಬರರ ತತ್ವ ಸಂದೇಶಗಳನ್ನು ಸಾರಲಾಯಿತು.

ಹಿರೇಮಸೂತಿಯ ಆವರಣದಲ್ಲಿ ನಡೆದ ಮುಹಮ್ಮದ್ ಪೈಗಂಬರ ಜಯಂತ್ಯುತ್ಸವದಲ್ಲಿ ಭಾಗವಹಿಸಿದ್ದ ಮೌಲಾನಾ ನಿಜಾಮ ಖಾದ್ರಿ ಮಾತನಾಡಿ, ದೇವನೊಬ್ಬ ನಾಮ ಹಲವು ಎಂದು ಹೇಳಿರುವ ಮುಹಮ್ಮದ್ ಪೈಗಂಬರರು, ಸರ್ವ ಸಮುದಾಯದವರು ಸ್ನೇಹ, ಭಾತೃತ್ವದಿಂದ ನಡೆದುಕೊಳ್ಳಬೇಕು ಎಂದು ಸಾರಿದ್ದಾರೆ. ಅವರ ತತ್ವೋಪದೇಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿವರಿಸಿದರು.

ಮೌಲಾನಾ ಸಲೀಂ ಸಖಾಫಿ, ಮೌಲಾನಾ ನಿಜಾಮ ಖಾದ್ರಿ ಅವರನ್ನು ಸನ್ಮಾನಿಸಲಾಯಿತು. ನಂತರ ಅನ್ನ ಸಂತರ್ಪಣೆ ಜರುಗಿತು. ಅಂಜುಮನ್ ಇಸ್ಲಾಂ ಕಮಿಟಿಯ ಉಪಾಧ್ಯಕ್ಷ ದಾದಾಪೀರಸಾಬ ಕೊರ್ಲಳ್ಳಿ, ಕಾರ್ಯದರ್ಶಿ ವಾಶಿಂಸಾಬ ಮಸೂತಿಮನಿ, ಸರ್ವ ಪದಾಧಿಕಾರಿಗಳು, ಸದಸ್ಯರು ಹಾಗೂ ಟಿಪ್ಪು ಸುಲ್ತಾನ ಯೂಥ್ ಕಮಿಟಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!