HomeKarnataka NewsHDK ಅವರನ್ನು ಪ್ರೀತಿಯಿಂದ ಕರಿಯಣ್ಣ ಅಂತಿದ್ದೆ, ನೋವಾಗಿದ್ರೆ ಕ್ಷಮಿಸಿ: JDS ಕಾರ್ಯಕರ್ತರಿಗೆ ಕ್ಷಮೆಯಾಚಿಸಿದ ಜಮೀರ್!

HDK ಅವರನ್ನು ಪ್ರೀತಿಯಿಂದ ಕರಿಯಣ್ಣ ಅಂತಿದ್ದೆ, ನೋವಾಗಿದ್ರೆ ಕ್ಷಮಿಸಿ: JDS ಕಾರ್ಯಕರ್ತರಿಗೆ ಕ್ಷಮೆಯಾಚಿಸಿದ ಜಮೀರ್!

For Dai;y Updates Join Our whatsapp Group

Spread the love

ಮೈಸೂರು:- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಕರಿಯ ಎಂದು ಕರೆದಿದ್ದ ಜಮೀರ್ ಇದೀಗ ವಿವಾದ ಹೆಚ್ಚಾಗುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೋರಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ತಮ್ಮ ಹೇಳಿಕೆ ಬಹಳಷ್ಟು ವಿವಾದ ಸೃಷ್ಟಿಯಾಗ್ತಿದ್ದಂತೆ ಕ್ಷಮೆ ಕೋರಿದರು.

ನಾನು ಮತ್ತು ಕುಮಾರಸ್ವಾಮಿ ಅವರು ಆತ್ಮೀಯರಾಗಿದ್ದವರು. 24 ಗಂಟೆಯಲ್ಲಿ 14 ಗಂಟೆ ಜೊತೆಯಲ್ಲಿ ಇರ್ತಾ ಇದ್ದೊ. ಅವರು ನನ್ನ ಕುಳ್ಳ ಅಂತಾ ಇದ್ರು, ನಾನು ಕರಿಯಣ್ಣ ಅಂತಿದ್ದೆ. ಈಗ ಚುನಾವಣೆ ಹಿನ್ನೆಲೆ ಅದನ್ನು ದೊಡ್ಡ ವಿಚಾರ ಮಾಡ್ತಾ ಇದ್ದಾರೆ.

ನಾನು ಮೊದಲ ಬಾರಿಗೆ ಕರಿಯಣ್ಣ ಅಂತಿಲ್ಲ. ನಾನು ಅಂತಹದ್ದು ಏನು ಹೇಳಿಲ್ಲ. ಪ್ರೀತಿಯಿಂದ ಅವರು ಕುಳ್ಳ ಅಂತಾ ಇದ್ರು, ನಾನು ಕರಿಯಣ್ಣ ಅಂತಾ ಇದ್ದೆ. ನನ್ನ ಮಾತಿಂದ ಯಾರಿಗಾದ್ರು ನಾವಾಗಿದ್ರೆ ನಾನು ಕ್ಷಮೆ ಕೇಳ್ತೀನಿ. ನನ್ನ ಹೇಳಿಕೆಯಿಂದ ಉಪಚುನಾವಣೆ ಮೇಲೆ ಪರಿಮಾಣ ಬೀರಲ್ಲ ಎಂದು ತಿಳಿಸಿದರು.

19 ರಂದು ವಕ್ಫ್ ಚುನಾವಣೆ ಇದೆ. ಈ ಹಿನ್ನೆಲೆ ಇಂದು ಸಭೆ ಕರೆದಿದ್ದೇವೆ. ಮತದಾರರು ಮಾತ್ರ ಭಾಗಿಯಾಗಿದ್ದಾರೆ. ವಕ್ಫ್ ಜಮೀನಿನ ವಿವಾದ ಇಲ್ಲಿ ಚರ್ಚೆ ಇಲ್ಲ. ವಕ್ಫ್ ಚುನಾವಣೆ ಪ್ರಚಾರ ಮಾತ್ರ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!