HomeEntertainmentಹೆಂಡತಿ ಕೋಪ ಮಾಡಿಕೊಂಡರೆ ನಾನು ಮುದ್ದು ರಾಕ್ಷಸಿ ಎನ್ನುತ್ತೇನೆ: ನಟ ದರ್ಶನ್‌

ಹೆಂಡತಿ ಕೋಪ ಮಾಡಿಕೊಂಡರೆ ನಾನು ಮುದ್ದು ರಾಕ್ಷಸಿ ಎನ್ನುತ್ತೇನೆ: ನಟ ದರ್ಶನ್‌

For Dai;y Updates Join Our whatsapp Group

ಸ್ಯಾಂಡಲ್‌ ವುಡ್‌ ನಟ ಧನ್ವೀರ್‌ ಗೌಡ ನಟನೆಯ ವಾಮನ ಸಿನಿಮಾದ ಟ್ರೈಲರ್‌ ನ ನಟ ದರ್ಶನ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಆತ್ಮೀಯ ಗೆಳೆಯನ ಸಿನಿಮಾದ ಟ್ರೈಲರ್‌ ಬಿಡುಗಡೆ ಮಾಡಿದ ದಾಸ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಇದೇ ವೇಳೆ ತನ್ನ ಹೆಂಡತಿಗೆ ನಾನು ಮುದ್ದು ರಾಕ್ಷಿಸಿ ಎಂದು ಕರೆಯುತ್ತೇನೆ ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹೇಳಿಕೊಂಡಿದ್ದಾರೆ.

‘ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ ‘ವಾಮನ’ನಾಗಿ ಏಪ್ರಿಲ್ 10ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೇಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆಯ ಕನ್ನಡ ಸಿನಿಮಾಗಳಿಗೆ ನಮ್ಮ ಸೆಲೆಬ್ರಿಟಿಗಳ ಪ್ರೋತ್ಸಾಹ ಎಂದಿನಂತೆ ಸದಾ ಬೆನ್ನೆಲುಬಾಗಿ ನಿಂತರಲಿ’ ಎಂದು ದರ್ಶನ್‌ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ವಾಮನ’ ಸಿನಿಮಾದ ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನಾನು ಧನ್ವೀರ್ ಅವರನ್ನು ಬೇರೆ ಬೇರೆ ರೀತಿ ನೋಡಿದ್ದೇನೆ. ‘ಬಜಾರ್’ ಸಿನಿಮಾದಲ್ಲಿ ಒಂದು ರೀತಿ ನೋಡಿದೆ, ‘ಬೈಟು ಲವ್’ ಚಿತ್ರದಲ್ಲಿ ಬೇರೆ ರೀತಿ ನೋಡಿದೆ. ಅವರ ‘ಕೈವ’ ಸಿನಿಮಾ ನನಗೆ ತುಂಬ ಇಷ್ಟವಾಗಿತ್ತು. ಈಗ ವಾಮನ ನೋಡುತ್ತೇವೆ. ಈ ನಾಲ್ಕು ಸಿನಿಮಾಗಳಲ್ಲಿ ಖುಷಿ ವಿಷಯ ಏನೆಂದರೆ ಎಲ್ಲಿಯೂ ರಿಪೀಟ್ ಇಲ್ಲ. ನಾಲ್ಕು ಸಬ್ಜೆಕ್ಟ್ ಕೂಡ ಬೇರೆ ಬೇರೆ ರೀತಿ ಇದೆ. ಈಗ ‘ವಾಮನ’ ತಾಯಿ ಸೆಂಟಿಮೆಂಟ್ ಇರುವ ಸಿನಿಮಾ. ತಾಯಿಗಾಗಿ, ಪ್ರೀತಿಗಾಗಿ ಒಬ್ಬ ಹೇಗೆಲ್ಲ ಬದಲಾಗುತ್ತಾನೆ ಎಂಬುದು ಇದರಲ್ಲಿದೆ’ ಎಂದಿದ್ದಾರೆ.

‘ನನಗೆ ಈ ಸಿನಿಮಾದಲ್ಲಿ ಮುದ್ದು ರಾಕ್ಷಸಿ ಸಾಂಗ್ ಇಷ್ಟ. ಎಲ್ಲಿಂದ ಹುಡುಕಿದ್ದೀರಿ, ತುಂಬ ಚೆನ್ನಾಗಿದೆ ಅಂತ ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಮನೆಯಲ್ಲಿ ನನ್ನ ಹೆಂಡತಿ ಕೋಪ ಮಾಡಿಕೊಂಡರೆ ನಾನು ಕೂಡ ರೇಗಿಸುತ್ತೇನೆ. ಮುದ್ದು ರಾಕ್ಷಸಿ ಥರ ಇದ್ದೀಯ ಅಂತ ಹೇಳುತ್ತೇನೆ. ಇದು ಒಳ್ಳೆಯ ಮನರಂಜನೆ ಇರುವ ಸಿನಿಮಾ’ ಎಂದು ದರ್ಶನ್ ಹೇಳಿದ್ದಾರೆ.

‘ದಯಮಾಡಿ ಕನ್ನಡ ಸಿನಿಮಾಗಳನ್ನು ಬೆಳೆಸಿ. ಯಾಕೆಂದರೆ, ಎಲ್ಲರೂ ಎಲ್ಲ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆದರೆ ನಾವು ಕೆಲವರು ಮಾತ್ರ ಕನ್ನಡಕ್ಕೆ ಸೀಮಿತ ಎಂದುಕೊಂಡಿರುತ್ತೇವೆ. ಕನ್ನಡ ಸಿನಿಮಾ ನೋಡಲಿಲ್ಲ ಎಂದರೆ ನಾವು ಇಲ್ಲಿಂದ ಬಿಟ್ಟು ಬೇರೆ ಕಡೆಗೆ ಹೋಗಲ್ಲ. ನೀವು ಕೊಟ್ಟ ಆಶೀರ್ವಾದದಿಂದ ತೋಟ, ಹಸು ಮಾಡಿಕೊಂಡಿದ್ದೇವೆ. ಯಾವತ್ತಿದ್ದರೂ ನಾವು ಕನ್ನಡದಲ್ಲೇ ಸಿನಿಮಾ ಮಾಡುವುದು. ಈ ಚಿತ್ರರಂಗ ಬಿಟ್ಟು ನಮಗೆ ಬೇರೆ ಗೊತ್ತಿಲ್ಲ’ ಎಂದಿದ್ದಾರೆ.

‘ನಾವು ನಂಬಿಕೊಂಡಿರುವುದೇ ಕನ್ನಡ ಪ್ರೇಕ್ಷಕರನ್ನು. ಚಿತ್ರಮಂದಿರದವರು ನಂಬಿಕೊಂಡಿರುವುದು ಕೂಡ ಕನ್ನಡ ಸಿನಿಮಾಗಳನ್ನು. ಇದು ಒಂದು ರೀತಿಯ ಚೈನ್ ಲಿಂಕ್. ಹುಳವನ್ನು ಕಪ್ಪೆ ತಿನ್ನುತ್ತೆ, ಕಪ್ಪೆಯನ್ನು ಹಾವು ತಿನ್ನುತ್ತೆ, ಹಾವನ್ನು ಹದ್ದು ಹಿಡಿಯುತ್ತದೆ. ಹದ್ದು ಸತ್ತು ಕೆಳಗೆ ಬಿದ್ದಾಗ ಮತ್ತೆ ಹುಳವೇ ತಿನ್ನುತ್ತದೆ. ಹಾಗೆ ಚಿತ್ರರಂಗ ಕೂಡ ಚೈನ್ ಲಿಂಕ್. ಹಾಗಾಗಿ ಎಲ್ಲರೂ ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಿ. ವಾಮನ ಸಿನಿಮಾಗೆ ಒಳ್ಳೆಯದಾಗಲಿ’ ಎಂದು ದರ್ಶನ್ ಅವರು ಶುಭ ಕೋರಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img