ವಿಜಯಸಾಕ್ಷಿ ಸುದ್ದಿ, ಗದಗ: ನಗರದ 35ನೇ ವಾರ್ಡಿನ ಶ್ರೀ ಕಾಶಿಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಎಂಎಲ್ಸಿ ಎಸ್.ವಿ. ಸಂಕನೂರ ಅವರ ಅನುದಾನದಡಿ ₹2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಇಂಟರ್ಲಾಕ್ ಫೇವರ್ಸ್ ಕಾಮಗಾರಿಯನ್ನು ಮಂಗಳವಾರ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ 35ನೇ ವಾರ್ಡಿನ ಸದಸ್ಯೆ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಶ್ರೀ ಕಾಶಿಲಿಂಗೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಕಲ್ಲೇಶ ಡಿ. ಮೂರಶಿಳ್ಳಿ, ಸಾಯಿಬಾಬೂಜಿ ನಗರಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಕೆ. ತೊಂಡಿಹಾಳ, ಗೌರವಾಧ್ಯಕ್ಷ ಎಂ.ಆರ್. ಸೋಂಪುರ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಮಡಿವಾಳರ, ಗೌರವಾಧ್ಯಕ್ಷೆ ರತ್ನಕ್ಕ ಯಳಮಲಿ, ಕಾರ್ಯದರ್ಶಿ ಎಚ್.ಬಿ. ಆದಪ್ಪನವರ, ಬಸವರಾಜ ಕುಕನೂರ, ಎಸ್.ಕೆ. ಕಂಡೆಪ್ಪಗೌಡರ, ಮಲ್ಲಣ್ಣ ಅಂಗಡಿ ಸೇರಿದಂತೆ ಟ್ರಸ್ಟ್ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು, ಬಡಾವಣೆಯ ಹಿರಿಯರು, ಮಹಿಳೆಯರು ಮತ್ತು ನಾಗರಿಕರು ಉಪಸ್ಥಿತರಿದ್ದರು.



