HomeGadag Newsಫುಟ್‌ಬಾಲ್ ಪಂದ್ಯಾವಳಿ ರೋಚಕ ಕ್ವಾರ್ಟರ್ ಫೈನಲ್

ಫುಟ್‌ಬಾಲ್ ಪಂದ್ಯಾವಳಿ ರೋಚಕ ಕ್ವಾರ್ಟರ್ ಫೈನಲ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಕೆ.ಎಚ್. ಪಾಟೀಲ ಸ್ಪೋರ್ಟ್ಸ್ ಇವೆಂಟ್ಸ್ ಹಾಗೂ ಕರ್ನಾಟಕ ಸ್ಪೋರ್ಟ್ಸ್ ಆಂಡ್ ಎಜುಕೇಶನ್ ಅಕಾಡೆಮಿ ಗದಗ ಇವರ ವತಿಯಿಂದ ನಡೆಯುತ್ತಿರುವ ಸಚಿವ ಎಚ್.ಕೆ. ಪಾಟೀಲ ಅಯೋಜಿಸಿರುವ ಫುಟ್‌ಬಾಲ್ ಪಂದ್ಯಾವಳಿಗಳು ಕ್ರೀಡಾ ಪ್ರೇಮಿಗಳಿಗೆ ರಸದೌತಣ ನೀಡುತ್ತಿವೆ.
ಪಂದ್ಯಾವಳಿಯ ನೇತೃತ್ವ ವಹಿಸಿರುವ ಯುವ ಮುಖಂಡ ಕೃಷ್ಣಗೌಡ ಪಾಟೀಲ, ಸಚಿನ ಪಾಟೀಲ ಇವರ ಉಪಸ್ಥಿತಿಯಲ್ಲಿ ಗದಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ಗುರುವಾರ ಉದ್ಘಾಟಿಸಿದರು.
ಮೊದಲನೇ ಪಂದ್ಯ ಡಿಫೆಂಡರ್ಸ್-ಸ್ಟ್ರೈಕರ್ಸ್ ತಂಡಗಳ ನಡುವೆ ನಡೆದು, ಎರಡೂ ತಂಡಗಳು 1-1 ಗೋಲುಗಳಿಂದ ಡ್ರಾ ಆಯಿತು. ನಂತರ ನಿರ್ಣಾಯಕರ ಅಭಿಪ್ರಾಯದಂತೆ 14 ನಿಮಿಷ ಹೆಚ್ಚುವರಿ ಸಮಯ ನೀಡಲಾಯಿತು. ಯಾವ ತಂಡವೂ ಗೋಲ್ ಹೊಡೆಯದ ಕಾರಣ, ತಂಡಗಳಿಗೆ ಫೆನಾಲ್ಟಿ ನೀಡಲಾಯಿತು. ಆಗ ಸ್ಟ್ರೈಕರ್ಸ್ ತಂಡ 6 ಗೋಲು ದಾಖಲಿಸಿತು. ನಂತರ ಡಿಫೆಂಡರ್ಸ್ ತಂಡ 7 ಗೋಲುಗಳನ್ನು ಹೊಡೆದು ಸೆಮೀಫೈನಲ್ ಪ್ರವೇಶಿಸಿತು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಡಿಫೆಂಡರ್ಸ್ ತಂಡದ ಚೇತನ ಭದ್ರಾಪೂರ ಪಡೆದುಕೊಂಡರು.
ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ರೆಬೆಲ್-ವಾರಿಯರ್ಸ್ ತಂಡಗಳ ನಡುವೆ ಏರ್ಪಟ್ಟಿತು. ರೆಬೆಲ್ ತಂಡ 2 ಗೋಲನ್ನು ಹೊಡೆದು ನೇರವಾಗಿ ಸೆಮಿಫೈನಲ್‌ಗೆ ಕಾಲಿಟ್ಟಿತು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ರೆಬೆಲ್ ತಂಡದ ಗೋಲ್ ಕೀಪರ್ ರಾಘು ಪಡೆದುಕೊಂಡರು.
ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಎಜುಕೇಶನ್ ಅಕಾಡೆಮಿಯ ಅಧ್ಯಕ್ಷ ಹಾಗೂ ಪಂದ್ಯಾವಳಿಗಳ ಆಯೋಜಕರಾದ ಸರ್ಫರಾಜ ಶೇಖ ಎಲ್ಲ ಫುಟ್ಬಾಲ್ ಆಟಗಾರರಿಗೆ ಹಾಗೂ ಫುಟ್‌ಬಾಲ್ ಪ್ರಿಯರಿಗೆ ಅಭಿನಂದನೆ ಸಲ್ಲಿಸಿದರು.
ಮೂರನೇ ಕ್ವಾರ್ಟರ್ ಫೈನಲ್ ಪಂದ್ಯ ಟರ್ಮಿನೇಟರ್ಸ್-ಅವೆಂಜರ್ಸ್ ನಡುವೆ ನಡೆದು, ಎರಡೂ ತಂಡಗಳು ಸಮನಾಗಿ 1-1 ಗೋಲುಗಳಿಂದ ಪಂದ್ಯ ಡ್ರಾ ಆಯಿತು. ಪುನಃ 14 ನಿಮಿಷ ಹೆಚ್ಚು ಸಮಯ ನೀಡಲಾಯಿತು. ಇಲ್ಲಿಯೂ ಸಹ ಯಾವ ತಂಡವೂ ಗೋಲನ್ನು ಹೊಡೆಯಲಿಲ್ಲ. ನಂತರ ಎರಡು ತಂಡಗಳಿಗೆ ಪೇನಾಲ್ಟಿ ನೀಡಲಾಯಿತು. ಆಗ ಟರ್ಮಿನೇಟರ್ಸ್ ತಂಡ 6 ಗೋಲುಗಳನ್ನು ಹೊಡೆದರೆ, ಅವೆಂಜರ್ಸ್ ತಂಡ 7 ಗೋಲುಗಳನ್ನು ಹೊಡೆದು ಗೆದ್ದು ನೇರವಾಗಿ ಸೆಮಿಫೈನಲ್ ಪ್ರವೇಶಿಸಿತು. 

LEAVE A REPLY

Please enter your comment!
Please enter your name here

E-Paper

E-paper

Must Read

spot_img