HomeGadag Newsಕ್ಯಾಪ್ಟನ್ ಡಾ. ಬಿ.ಎಸ್. ರಾಠೋಡರಿಗೆ ಸನ್ಮಾನ

ಕ್ಯಾಪ್ಟನ್ ಡಾ. ಬಿ.ಎಸ್. ರಾಠೋಡರಿಗೆ ಸನ್ಮಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯದ ನೌಕರರ ಸಂಘದ ಪರವಾಗಿ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಅವರು ನೂತನವಾಗಿ ವಿದ್ಯಾದಾನ ಸಮಿತಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿದ ಕ್ಯಾಪ್ಟನ್ ಡಾ. ಬಿ.ಎಸ್. ರಾಠೋಡ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಪದಾಧಿಕಾರಿಗಳಾದ ಪ್ರಾ. ಎಮ್.ಸಿ. ಕಟ್ಟಿಮನಿ, ಎಸ್.ಬಿ. ಹಾವೇರಿ, ಎಸ್.ಎಸ್. ಕುಲಕರ್ಣಿ, ಎಸ್.ಐ. ಮೇಟಿ, ಡಾ. ದತ್ತಪ್ರಸನ್ನ ಪಾಟೀಲ, ನಿವೃತ್ತ ಮುಖ್ಯೋಪಾಧ್ಯಾಯರಾದ ಎನ್.ವಿ. ಜೋಷಿ, ಡಾ. ಬಿ.ಎಸ್. ರಾಠೋಡರನ್ನು ಅಭಿನಂದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನೌಕರರ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img